ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲಂಚ ಪಡೆಯುತ್ತಿದ್ದ ಅಧಿಕಾರಿಯ ಮೇಲೆ ದಾಳಿ ನಡೆಸಿದ ವೇಳೆ ಅವರು ತಪ್ಪಿಸಿಕೊಳ್ಳಲು ಎಸ್ಕೇಪ್ ಆಗಿದ್ದು, ಲೋಕಾಯುಕ್ತ ಅಧಿಕಾರಿಗಳು ಸಿನಿಮಿಯಾ ಸ್ಟೈಲ್’ನಲ್ಲಿ 15 ಕಿಮೀ ಚೇಸಿಂಗ್ ಮಾಡಿ ಹಿಡಿದ ಘಟನೆ ನಡೆದಿದೆ.
ನೆಲಮಂಗಲ ಬಳಿಯ ಸೊಂಡೇಕೊಪ್ಪದಲ್ಲಿ ಘಟನೆ ನಡೆದಿದೆ. ರಂಗದಾಮಯ್ಯ ಎಂಬುವವರು ಕೆಜಿ ಸರ್ಕಲ್ ಬಳಿಯಿರುವ ತಹಶೀಲ್ದಾರ್ ಕಚೇರಿಯ ಫುಡ್ ಇನ್ಸ್ಪೆಕ್ಟರ್ ಆಗಿರುವ ಮಹಂತೇಗೌಡ ಬಳಿ ಟ್ರೇಡ್ ಲೈಸೆನ್ಸ್ ಮಾಡಿಸಲು ತೆರಳಿದ್ದರು. ಈ ವೇಳೆ ಅಧಿಕಾರಿ 1 ಲಕ್ಷ ರೂ. ಹಣವನ್ನು ಲಂಚವನ್ನಾಗಿ ಕೇಳಿದ್ದ. ಮುಂಗಡವಾಗಿ 43 ಸಾವಿರ ರೂ. ಹಣವನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ.
ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆದು ಟ್ರಾಪ್ ಮಾಡಿದ್ದಾರೆ. ಹಣ ಪಡೆಯುವ ವೇಳೆ ಟ್ರಾಪ್ ಎಂದು ತಿಳಿದು ಪರಾರಿಯಾಗಲು ಮಹಂತೇಗೌಡ ಯತ್ನಿಸಿದ್ದಾನೆ.
ಹಣ ಪಡೆದು ಸುಮಾರು 15 ಕಿಮೀ ತೆರಳಿದ್ದಾನೆ. ಆದರೆ ಬೆನ್ನಟ್ಟಿದ ಲೋಕಾಯಕ್ತ ಅಧಿಕಾರಿಗಳು ಮಹಂತೇಗೌಡನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post