ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ದೇಶದ ಎಲ್ಲಾ ನಾಗರಿಕರಿಗೂ ಜಿಎಸ್‌ಟಿ ಬಗೆಗಿನ ಅರಿವು ಅತ್ಯಗತ್ಯ ಎಂದು ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಡಾ. ನಾಗರಾಜ ತಿಳಿಸಿದರು.
ಶಿವಮೊಗ್ಗದ ಪಿಎಸ್‌ಐಟಿಎಂನ ಎಂಬಿಎ ವಿಭಾಗದಲ್ಲಿ ಜುಲೈ 11ರಿಂದ 13ರವರೆಗೆ ಆಯೋಜಿಸಲಾಗಿದ್ದ ಜಿಎಸ್‌ಟಿ ವಿದ್ಯಾರ್ಥಿ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ. ಚೈತನ್ಯಕುಮಾರ್ ಮಾತನಾಡಿ, ಹೊಸ ಪರೋಕ್ಷ ತರಿಗೆಯು ದೇಶದಲ್ಲಿ ಏಕ ರೀತಿಯ ತೆರಿಗೆ ವ್ಯವಸ್ಥೆಯನ್ನು ರೂಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
Also read: ಈ ಜಿಲ್ಲೆಗಳಲ್ಲಿ 2 ದಿನ ಆರೆಂಜ್ ಅಲರ್ಟ್: ಇನ್ನು ಎಷ್ಟು ದಿನ ಭಾರೀ ಮಳೆ? ಶಿವಮೊಗ್ಗದ ಪರಿಸ್ಥಿತಿಯೇನು?
ಕಾರ್ಯಕ್ರಮದಲ್ಲಿ ಜಿಎಸ್‌ಟಿ ಕುರಿತಾದ ಸಮಗ್ರ ಮಾಹಿತಿಯನ್ನು ಹಾಗೂ ಹೊಸ ಪರೋಕ್ಷ ತರಿಗೆಯಿಂದ ದೇಶದ ಆರ್ಥಿಕತೆಯ ಮೇಲಿನ ಪರಿಣಾಮಗಳನ್ನು ವಿವರವಾಗಿ ಚರ್ಚಿಸಲಾಯಿತು. ಎಂಬಿಎ ಮತ್ತು ಎಂ.ಕಾಂ ವಿಭಾಗದ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡರು. ಭಾಗವಹಿಸಿದಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಿಎ ನರೇಂದ್ರ, ಸಿಎ ಶ್ರೀರಾಮ್, ಸಿ.ಎ ಸುಜನ್ ಹಾಗೂ ಸಿ.ಎ ಮಹೇಂದ್ರ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಎಂಬಿಎ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ್, ಅರ್ಜುನ್, ಜ್ಯೋತಿ ಹಾಗೂ ಹೇಮಂತಕುಮಾರ ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















