ರಾಜಮನೆತನದವರಿಗೆ ಆಭರಣ ವ್ಯಾಪಾರಿಯಾಗಿದ್ದ 150 ವರ್ಷ ಇತಿಹಾಸವುಳ್ಳ ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆರ್ಸ್‍ನಿಂದ ಇದೀಗ ಶಿವಮೊಗ್ಗದ ಜನತೆಗಾಗಿ ಅಸಾಧಾರಣ ಕರಕುಶಲತೆ ಮತ್ತು ವಿನ್ಯಾಸ ಹೊಂದಿರುವ ಆಭರಣ ಪ್ರದರ್ಶನ ಮತ್ತು ಮಾರಾಟ ಇಂದಿನಿಂದ ಜು. 24ರವರೆಗೆ ಹೋಟೆಲ್ ರಾಯಲ್ ಆರ್ಕೆಡ್‍ನಲ್ಲಿ ಪ್ರಾರಂಭವಾಗಿದ್ದು, ಶಾಸಕ ಎಸ್.ಎನ್. ಚನ್ನಬಸಪ್ಪ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಈ ಚಿನ್ನಾಭರಣ ಸಂಸ್ಥೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ಗುಣಮಟ್ಟ ಮತ್ತು ನಂಬಿಕೆಗೆ ಹೆಸರುವಾಸಿಯಾಗಿದೆ. ಶಿವಮೊಗ್ಗದಲ್ಲಿ ವಿಶೇಷ ಆಭರಣ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಶಿವಮೊಗ್ಗ ಜನತೆ ಇದರ ಸದುಪಯೋಗ ಪಡೆಯಲಿ ಮತ್ತು ಈ ಸಂಸ್ಥೆ ಇಲ್ಲಿ ಶಾಶ್ವತವಾಗಿ ಒಂದು ಶಾಖೆಯನ್ನು ತೆರೆಯಲಿ ಎಂದು ಶುಭ ಹಾರೈಸಿದರು.
ಸಾಂಪ್ರದಾಯಿಕ ಮತ್ತು ಸಮಕಾಲೀನ ಕಸೂತಿ ಸಂಗ್ರಹದ ವಿಶಿಷ್ಟ ಶ್ರೇಣಿಯೊಂದಿಗೆ ಅಸಾಧಾರಣ ಆಭರಣ ಪ್ರದರ್ಶನ. ಯುಗಾದಿ ವಿಶೇಷ ಕೊಡುಗೆ – 1 ಕ್ಯಾರೆಟ್ ವಜ್ರ ಖರೀದಿಗೆ 2 ಗ್ರಾಂ ಚಿನ್ನದ ನಾಣ್ಯ ಮತ್ತು 1 ಗ್ರಾಂ ಚಿನ್ನ ಖರೀದಿಗೆ 3 ಗ್ರಾಂ ಬೆಳ್ಳಿ ನಾಣ್ಯ ಉಚಿತ. ಷರತ್ತುಗಳು ಅನ್ವಯವಾಗಿವೆ.
ಸಿ. ಕೃಷ್ಣಯ್ಯ ಚೆಟ್ಟಿ ಗ್ರೂಪ್ ಆಫ್ ಜ್ಯುವೆಲ್ಲರ್‍ಸ್ ಆಭರಣ ಸಂಗ್ರಹಗಳು ಸೊಬಗು ಮತ್ತು ಆಕರ್ಷಕ ಶೈಲಿಯ ಜೊತೆಗೆ ಸೂಕ್ಷ್ಮವಾದ ವಜ್ರಗಳೊಂದಿಗೆ, ವೈಡೂರ್ಯ, ಹವಳ, ಮುತ್ತುಗಳು, ಮಾಣಿಕ್ಯಗಳಂತಹ ಅಪರೂಪದ ರತ್ನಗಳೊಂದಿಗೆ ಆಕರ್ಷಕ ವಿನ್ಯಾಸಗಳೊಂದಿಗೆ ಕಾಣಿಸಿಕೊಂಡಿವೆ. ಈ ಸಂಗ್ರಹಣೆಯು ನಿಮ್ಮ ವ್ಯಕ್ತಿತ್ವದತ್ತ ಗಮನ ಸೆಳೆಯಲು ಮತ್ತು ನಿಮ್ಮ ಉಡುಪಿಗೆ ಸರಿ ಹೊಂದುವ ಆಭರಣಗಳನ್ನು ನೀಡುತ್ತದೆ. ಸಂಪೂರ್ಣ ಸಂಗ್ರಹ ವೀಕ್ಷಿಸಲು: https://www.ckcjewellers.com/classic-collection ಸಂಪರ್ಕಿಸಬಹುದು.
Also read: ಜುಲೈ 22, 23ರಂದು ‘ಕಲಾ ಸಂಭ್ರಮ’ ನೃತ್ಯ – ಸಂಗೀತ ಕಾರ್ಯಕ್ರಮ
ನೈಜ 24-ಕ್ಯಾರಟ್ ಚಿನ್ನದಿಂದ ತುಂಬಿದ, ಅಪರೂಪದ ಸುಗಂಧಗಳು www.ckcjewellers.com/Rare-scents ತಾಣದಲ್ಲಿ ಆಡಮಾಸ್, ಔರಮ್, ಬೆರಿಲ್, ಕೊರುಂಡಮ್ ಮತ್ತು ಪ್ಲಾಟಿನಮ್ 5 ಸೊಗಸಾದ ಅವತರಣಿಕೆಗಳಲ್ಲಿ ಲಭ್ಯವಿದೆ.
ಈ ಸಂದರ್ಭದಲ್ಲಿ ಹಿರಿಯ ಉದ್ಮಮಿ ಅಶ್ವತ್ಥನಾರಾಯಣ ಶೆಟ್ಟಿ, ಸಂಸ್ಥೆಯ ಪ್ರಮುಖರಾದ ಪ್ರಸಾದದ, ಶೇಷಾದ್ರಿ ಹಾಗೂ ಸಿಬ್ಬಂದಿ ವರ್ಗದವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post