ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೀವು ದ್ವಿಚಕ್ರ ವಾಹನ #TwoWheeler ಸವಾರಿ ಮಾಡುವಾಗ ಅರ್ಧ ಹೆಲ್ಮೆಟ್ #Helmet ಧರಿಸುತ್ತೀರಾ? ಹಾಗಾದರೆ ಇಂದೇ ಬಿಟ್ಟುಬಿಡಿ, ಇಲ್ಲದೇ ಇದ್ದರೆ ನಾಳೆಯಿಂದ ಬೀಳುತ್ತೆ ದಂಡ…
ಹೌದು…. ಇಂತಹದ್ದೊಂದು ಮಹತ್ವದ ಜಾಗೃತಿ ಕಾರ್ಯಾಚರಣೆಯನ್ನು ನಡೆಸಿರುವ ಸಂಚಾರಿ ಪೊಲೀಸರು, #TrafficPolice ಅರ್ಧ ಹೆಲ್ಮೆಟ್ ಧರಿಸುವ ಸವಾರರಿಗೆ ಇಂದು ಎಚ್ಚರಿಕೆ ನೀಡಿದ್ದಾರೆ.
ಶಿವಪ್ಪ ನಾಯಕ ವೃತ್ತದಲ್ಲಿ ಟ್ರಾಫಿಕ್ ಪೊಲೀಸ್ ಇನ್ಸ್ಪೆಕ್ಟರ್ ಸಂತೋಷ್ ನೇತೃತ್ವದಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಲಾಯಿತು.
ಇಂದು ಎಚ್ಚರಿಕೆ, ನಾಳೆಯಿಂದ ದಂಡ
ಸುರಕ್ಷಿತವಲ್ಲದ ಅರ್ಧ ಹೆಲ್ಮೆಟ್ #Helmet ಧರಿಸಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರರನ್ನು ತಡೆದ ಅಂತಹ ಹೆಲ್ಮೆಟ್’ಗಳನ್ನು ವಶಕ್ಕೆ ಪಡೆದಿದ್ದಾರೆ. ಸವಾರರು ಧರಿಸಿದ್ದ ನೂರಾರು ಅರ್ಧ ಹೆಲ್ಮೆಟ್’ಗಳನ್ನು ವಶಕ್ಕೆ ಪಡೆದ ಪೊಲೀಸರು ಇನ್ನು ಮುಂದೆ ಇಂತಹವುಗಳನ್ನು ಧರಿಸದಂತೆ ಸೂಚನೆ ನೀಡಿದ್ದಾರೆ.
Also Read: ಶಿವಮೊಗ್ಗದ ವಾಹನ ಸವಾರರೇ ಅರ್ಧ ಹೆಲ್ಮೆಟ್ ಹಾಕ್ತೀರಾ? ಹಾಗಾದ್ರೆ ಈ ತುರ್ತು ಸುದ್ದಿ ಓದಿ
ಇಂದು ಕೇವಲ ಅರ್ಧ ಹೆಲ್ಮೆಟ್’ಗಳನ್ನು ವಶಕ್ಕೆ ಪಡೆದ ಪೊಲೀಸರು, ನಾಳೆಯಿಂದ ದಂಡ #Fine ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅಪಾಯದ ಜಾಗೃತಿ
ಇನ್ನು, ಅವೈಜ್ಞಾನಿಕ ಹಾಗೂ ಅಪಾಯಕಾರಿಯಾದ ಅರ್ಧ ಹೆಲ್ಮೆಟ್ ಧರಿಸುವುದರಿಂದ ಆಗಬಹುದಾದ ಅನಾಹುತಗಳ ಕುರಿತಾಗಿ ಸಂಚಾರಿ ಪೊಲೀಸರು #TrafficPolice ವಾಹನ ಸವಾರರಿಗೆ ಜಾಗೃತಿ ಮೂಡಿಸಿದರು.
ಸವಾರರು ಧರಿಸಿದ್ದ ಅರ್ಧ ಹೆಲ್ಮೆಟ್‌ಗಳನ್ನು ವಶಕ್ಕೆ ಪಡೆದು, ಇಂತಹ ಹೆಲ್ಮೆಟ್’ಗಳನ್ನು ಧರಿಸಿದ ಸಂದರ್ಭದಲ್ಲಿ ಅಪಘಾತವುಂಟಾದರೆ ಆಗಬಹುದಾದ ಅಪಾಯ ಎಂತಹುದ್ದು ಎಂಬುದನ್ನು ವಿವರಿಸಿದರು.
ಅಲ್ಲದೇ, ಪೂರ್ಣವಾಗಿ ಮುಚ್ಚುವ ಪ್ರಮಾಣಪತ್ರವಿರುವ ಗುಣಮಟ್ಟದ ಹೆಲ್ಮೆಟ್’ಗಳನ್ನು ಧರಿಸುವುದರಿಂದ ಆಗುವ ಪ್ರಯೋಜನಗಳನ್ನೂ ಸಹ ಪೊಲೀಸರು ವಿವರಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post