ಕಲ್ಪ ಮೀಡಿಯಾ ಹೌಸ್ | ಉಡುಪಿ |
ಖಾಸಗೀ ಕಾಲೇಜಿನ ಶೌಚಾಲಯದಲ್ಲಿ ಯುವತಿಯರ ವೀಡಿಯೋ ದೊರೆಯದ ಹಾಗೂ ಈ ಕುರಿತಂತೆ ಯಾವುದೇ ಸಾಕ್ಷಿಗಳು ದೊರೆಯದ ಕಾರಣ ಪೊಲೀಸರು ಆರಂಭದಲ್ಲಿ ಸುಮೋಟೋ ಪ್ರಕರಣ ದಾಖಲಿಸಲ್ಲ ಎಂದು ರಾಷ್ಟ್ರೀಯ ಮಹಿಳಾ ಆಯೋಗದ National Commission for Womens ಸದಸ್ಯೆ ಖುಷ್ಬೂ ಸುಂದರ್ Khushboo Sundar ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಆ ವೀಡಿಯೋ ಎಲ್ಲಿಯೂ ದೊರೆತಿಲ್ಲ. ಅಲ್ಲದೇ ಪ್ರಕರಣ ಕುರಿತಂತೆ ಯಾವುದೇ ಸಾಕ್ಷಿಗಳೂ ಸಹ ದೊರೆತಿರಲಿಲ್ಲ. ಹೀಗಾಗಿ, ಆರಂಭದಲ್ಲಿ ಸುಮೋಟೋ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ. ಅಲ್ಲದೇ, ಈವರೆಗೂ ಯಾರಾದರೂ ದೂರನ್ನಾದರೂ ದಾಖಲಿಸಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
ಕಾಲೇಜಿಗೆ ಖುಷ್ಬೂ ಭೇಟಿ
ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಇಂದು ಬೆಳಿಗ್ಗೆ ಕಾಲೇಜಿಗೆ ಭೇಟಿ ನೀಡಿದರು.
Also read: ವೀಡಿಯೋದ ಸಾಕ್ಷಿ ಲಭ್ಯವಾಗಿಲ್ಲ, ದೊರೆಯದಿದ್ದರೆ ಚಾರ್ಜ್ ಶೀಟ್ ಸಾಧ್ಯವಿಲ್ಲ: ಖುಷ್ಗೂ ಸ್ಪಷ್ಟನೆ
ಪ್ರಕರಣದ ವಿಚಾರಣೆಗಾಗಿ ಕಾಲೇಜಿಗೆ ಆಗಮಿಸಿದ ಖುಷ್ಬೂ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿದರು. ಇದೇ ವೇಳೆ ಘಟನೆ ನಡೆದ ಶೌಚಾಲಯವನ್ನು ಕೂಡ ಅವರು ಪರಿಶೀಲಿಸಿದರು.
ಕಾಲೇಜಿನ ನಿರ್ದೇಶಕಿ ರಶ್ಮಿ ಕಷ್ಣ ಪ್ರಸಾದ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೇ ಮಚ್ಚಿಂದ್ರ, ನ್ಯಾಯವಾದಿ ಮೇರಿ ಶ್ರೇಷ್ಠ, ಕಾಲೇಜಿನ ಮುಖ್ಯ ಶೈಕ್ಷಣಿಕ ಸಂಯೋಜನಾಧಿಕಾರಿ ಬಾಲಕೃಷ್ಣ ಪರ್ಕಳ, ಪ್ರಾಂಶುಪಾಲ ರಾಜೀಬ್ ಮಂಡಲ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post