ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೈದರಾಬಾದ್‍ನಲ್ಲಿ ಭಾನುವಾರ ನಿಧನರಾದ ಕ್ರಾಂತಿಕಾರಿ ಹಾಡುಗಾರ, ಪ್ರಜಾ ಗಾಯಕ ಗದ್ದರ್ ಅವರಿಗೆ ಗೌರವ ಪೂರ್ವಕವಾಗಿ ಶ್ರದ್ದಾಂಜಲಿ ಸಲ್ಲಿಸುವ ಸಲುವಾಗಿ ಶಿವಮೊಗ್ಗದ ಗದ್ದರ್ ಅಭಿಮಾನಿಗಳು ಹಾಗೂ ಸಮಾನಮನಸ್ಕರಿಂದ ಆ.9ರಂದು ಬುಧವಾರ ಸಂಜೆ ನಗರದಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಲಾಗಿದೆ.
ಅಂದು ಸಂಜೆ 5 ಗಂಟೆಗೆ ನಗರದ. ಮೀಡಿಯಾ ಹೌಸ್ ನಲ್ಲಿ ನುಡಿನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹಲವು ಗಣ್ಯರು ಭಾಗವಹಿಸಲಿದ್ದಾರೆಂದು ಶಿವಮೊಗ್ಗದ ಗದ್ದರ್ ಅಭಿಮಾನಿಗಳು ಹಾಗೂ ಸಮಾನಮನಸ್ಕರ ಪರವಾಗಿ ಪತ್ರಕರ್ತ ದೇಶಾದ್ರಿ ಹೊಸ್ಮನೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕ್ರಾಂತಿಕಾರಿ ಹಾಡುಗಾರ, ಪ್ರಜಾ ಗಾಯಕ ಗದ್ದರ್ ಅವರ ನಿಧನವು ಶೋಷಿತ ಸಮುದಾಯ ಗಳಪಾಲಿಗೆ ದೊಡ್ಡ ನಷ್ಟವೇ ಆಗಿದೆ. ಅವರ ನಿಧನ ಶಿವಮೊಗ್ಗದ ಅವರ ಅಭಿಮಾನಿಗಳಿಗೂ ಅತೀವ ದುಃಖ ತಂದಿದೆ.
Also read: ರಾಜ್ಯ ಸರ್ಕಾರದ ರೈತ ವಿರೋಧಿ ಧೋರಣೆ ಖಂಡಿಸಿ ಜಿಲ್ಲಾ ಬಿಜೆಪಿ ರೈತಮೋರ್ಚಾ ಪ್ರತಿಭಟನೆ
ಶಿವಮೊಗ್ಗಕ್ಕೂ ಅವರಿಗೂ ಅವಿನಾಭಾವ ನಂಟು ಇದೆ. 1996, 1998ರಲ್ಲಿ ಎರಡು ಸಲ ಶಿವಮೊಗ್ಗಕ್ಕೆ ಬಂದು ಕುವೆಂಪು ವಿವಿ, ಭದ್ರಾವತಿ, ಡಿಸಿಸಿ ಬ್ಯಾಂಕ್ ಸಭಾಂಗಣ, ನಗರದ ಸೈನ್ಸ್ ಮೈದಾನದಲ್ಲಿ ಸಾವಿರಾರು ಜನರಿಂದ ಕಿಕ್ಕಿರಿದ ಸಮಾವೇಶದಲ್ಲಿ ಜನನಾಟ್ಯ ಮಂಡಳಿ ತಂಡದ ಮೂಲಕ ಶಿವಮೊಗ್ಗದ ಜನರ ಎದೆಯಲ್ಲಿ ಕ್ರಾಂತಿಗೀತೆ ನೃತ್ಯಗಳ ಮೂಲಕ ಹೋರಾಟದ ಝಲಕ್ ಸೃಷ್ಟಿ ಮಾಡುವ ಜೊತೆಗೆ ರಂಜಿಸಿದ್ದರು. ಇವರ ನಿಧನ ಜನಪರ ಚಳವಳಿಗಳು ಹಾಗೂ ಶೋಷಿತ ಸಮಾಜಕ್ಕೆ ತೀವ್ರ ನೋವು ತಂದಿದೆ.
ಅದೇ ಕಾರಣಕ್ಕೆ ಅವರಿಗೊಂದು ನುಡಿನಮನ ಸಲ್ಲಿಸುವುದು ನಮ್ಮೆಲ್ಲರ ಆಧ್ಯ ಕರ್ತವ್ಯ. ಗದ್ಧರ್ ಅಭಿಮಾನಿಗಳು ಹಾಗೂ ಸಮಾನ ಮನಸ್ಕ ಗೆಳೆಯರು ನುಡಿನಮನ ಸಭೆಗೆ ಆಗಮಿಸಬೇಕೆಂದು ತಮ್ಮಲ್ಲಿ ವಿನಂತಿ ಮಾಡುತ್ತೇನೆಂದು ಅವರು ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ 8073502892ರಲ್ಲಿ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post