ಕಲ್ಪ ಮೀಡಿಯಾ ಹೌಸ್ | ಚಾಮರಾಜನಗರ |
ಶೃಂಗೇರಿ ದಕ್ಷಿಣಾಮ್ನಾಯ ಶಾರದಾ ಪೀಠದ ಕಿರಿಯ ಸ್ವಾಮೀಜಿ ವಿಧುಶೇಖರ ಭಾರತಿ ಶ್ರೀಗಳ #VidhushekharaBharatiSwamiji ವರ್ಧಂತಿ ಮಹೋತ್ಸವವನ್ನು ಮೈಸೂರಿನ #Mysore ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮಾದರಿಯಾಗಿದೆ.
ಚಾಮರಾಜನಗರದ #Chamarajanagar ಪಟ್ಟಾಭಿ ರಾಮಮಂದಿರದಲ್ಲಿ ನೆಡೆದ ವರ್ಧಂತಿ ಮಹೋತ್ಸವದಲ್ಲಿ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದಿಂದ ನೆರೆದಿದ್ದ 50ಕ್ಕೂ ಹೆಚ್ಚು ಬ್ರಾಹ್ಮಣರಿಗೆ #Brahmin ಉಪಾಕರ್ಮಕ್ಕೆ ಯಜ್ಞೋಪವೀತ, ಶಂಕರಾಚಾರ್ಯರ ಭಾವಚಿತ್ರ, ಉಭಯ ಜಗದ್ಗುರುಗಳ ಭಾವಚಿತ್ರ ಹಾಗೂ ಶೃಂಗೇರಿ #Sringeri ಮಠ ಪ್ರಕಟಿಸಿರುವ ಸಂಧ್ಯಾವಂದನೆಯ ಪುಸ್ತಕದ ಕಿಟ್ ವಿತರಣೆ ಮಾಡಲಾಯಿತು.

ಮೈಸೂರು #Mysore ಹಾಗೂ ಚಾಮರಾಜನಗರದಲ್ಲಿ ಮುಂಬರುವ ಋಗುಪಾಕರ್ಮದ #Upakarma ಪ್ರಯುಕ್ತ ಬ್ರಾಹ್ಮಣರಿಗೆ ಯಜ್ಞೋಪವೀತ, ಶೃಂಗೇರಿ ಮಠ ಪ್ರಕಟಿಸಿರುವ ಸಂಧ್ಯಾವಂದನೆಯ ಪುಸ್ತಕ, ಶಂಕರಾಚಾರ್ಯರ ಭಾವಚಿತ್ರ, ಉಭಯ ಜಗದ್ಗುರುಗಳ ಭಾವಚಿತ್ರ ಹಾಗೂ ಶಾರದಾ ಮಾತೆಯ ಭಾವಚಿತ್ರ ಕೂಡ್ಲೂರು ಗುಂಡಪ್ಪ ಪ್ರತಿಷ್ಠಾನದ ವತಿಯಿಂದ ನೀಡಲಾಗಿದೆ ಎಂದರು.

ಧರ್ಮೋ ರಕ್ಷತಿ ರಕ್ಷಿತಾಃ ಎಂದು ಶಾಸ್ತ್ರ ಹೇಳುತ್ತದೆ ಅಂತಹ ಧರ್ಮವನ್ನು ನಾವು ದಿನನಿತ್ಯದ ಜೀವನದಲ್ಲಿ ಕಾಪಾಡಿಕೊಂಡರೆ ಆ ಧರ್ಮವೇ ನಮ್ಮನ್ನು ಕಾಪಾಡುತ್ತದೆ. ಇಲ್ಲಿ ಧರ್ಮವೆಂದರೆ ಉತ್ತಮ ಜೀವನ ಶೈಲಿ, ಉತ್ತಮವಾದ ಜೀವನ ಶೈಲಿ ರೂಢಿಸಿಕೊಂಡರೆ ಆ ಜೀವನ ಶೈಲಿಯೇ ನಮ್ಮನ್ನು ಕಾಪಾಡುತ್ತದೆ ಎಂಬುದೇ ಇದರ ಅರ್ಥ ಎಂದರು.

ನಂಜನಗೂಡು #Nanjanagud ಶ್ರೀಕಂಠೇಶ್ವರ ದೇವಸ್ಥಾನದ ಆಗಮಿಕರಾದ ಶ್ರೀ ನೀಲಕಂಠ ದೀಕ್ಷಿತರು ಮಾತನಾಡಿ, ನಾವು ಬೆಳೆದ ಮೇಲೆ ಎಷ್ಟೊ ಸಣ್ಣ ವಿಚಾರಗಳನ್ನು ಮರೆಯುತ್ತೇವೆ. ಯಾವುದು ಸಣ್ಣ ವಿಚಾರವೆಂದು ಪರಿಗಣಿಸಿ ನಿರ್ಲಕ್ಷ ಮಾಡುತ್ತೇವೊ ಅದೇ ನಮ್ಮ ಜೀವನದಲ್ಲಿ ದೊಡ್ಡ ಬದಲಾವಣೆ ತರುತ್ತದೆ. ಪೂಜೆ, ಸಂಧ್ಯಾವಂದನೆ, ಧ್ಯಾನ ಹಾಗೂ ಜಪ ನಮ್ಮ ನಿತ್ಯ ಕಾಯಕವಾಗಬೇಕು ಎಂದು ತಿಳಿಸಿದರು.
ಪಟ್ಟಾಭಿ ರಾಮಮಂದಿರ ಟ್ರಸ್ಟ್ ಅಧ್ಯಕ್ಷರಾದ ಕೆ. ಬಾಲಸುಬ್ರಹ್ಮಣ್ಯಂ ಅವರು ಮಾತನಾಡಿ, ಯುವಕರು ತಮ್ಮ ಶಿಕ್ಷಣ, ಹವ್ಯಾಸ, ಉದ್ಯೋಗದ ಜೊತೆಗೆ ಆಧ್ಯಾತ್ಮಿಕ ವಿಚಾರಗಳನ್ನು ತಿಳಿದುಕೊಳ್ಳಬೇಕು. ಸನಾತಾನ ಸಂಸ್ಕೃತಿಯ ವಾರಸುದಾರರು ನೀವು ಯುವಕರು, ಧರ್ಮ, ಶಿಕ್ಷಣ, ಸಂಸ್ಕಾರ ವಿಚಾರಗಳನ್ನು ಜಗತ್ತಿಗೆ ತಿಳಿಸಲು ಚಾಮರಾಜನಗರದ ಪಟ್ಟಾಭಿ ರಾಮಮಂದಿರ ಯಾವಾಗಲೂ ಸಿದ್ದವಾಗಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಇಂದಿರಮ್ಮ ಗುಂಡಪ್ಪ, ಕೆ.ಆರ್. ರಂಗರಾಜು, ಕೆ.ಆರ್. ಕೃಷ್ಣ, ಕೆ.ಆರ್. ನಾಗರಾಜ್, ಕೆ.ಆರ್. ಮಂಜು, ರಾಧಾ ಪ್ರೇಮ್ ಕುಮಾರ್, ವಿನಯ್, ನಿರಂಜನ್, ಕಾಶ್ಯಪ ಸಿಂಹ, ನಿರಂಜನ್, ಪುನೀತ್ ಹಾಗೂ ಕೂಡ್ಲೂರು ಗುಂಡಪ್ಪ ರವರ ಕುಟುಂಬ ವರ್ಗ, ಪಟ್ಟಾಭಿ ರಾಮಮಂದಿರದ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯಂ ರವರು, ಭಾಜಪ ಮುಖಂಡರಾದ ಬಾಲಸುಬ್ರಹ್ಮಣ್ಯ, ಸೇವಾ ಭಾರತಿಯ ರಮೇಶ್, ಬ್ರಾಹ್ಮಣ ಮುಖಂಡರಾದ ಲಕ್ಷ್ಮೀ ನರಸಿಂಹ ಅವರು, ಚಾಮರಾಜನಗರದ ಯುವ ವೇದ ನಿಧಿ ಕಾರ್ತಿಕ್ ಭಾರದ್ವಾಜ್, ಫಲಾಶ ಭಾರದ್ವಾಜ್ ಹಾಗೂ ಶಂಕರಾಚಾರ್ಯರ ಪೀಠದ ಅಪಾರ ಭಕ್ತರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post