ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಚಂದ್ರಯಾನ-3ರ Chandrayana-3 ವಿಕ್ರಂ ಲ್ಯಾಂಡರ್ Vikram Lander ಚಂದ್ರನ ಮೇಲೆ ಯಶಸ್ವಿಯಾಗಿ ಸಾಫ್ಟ್ ಲ್ಯಾಂಡ್ ಆದ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ISRO President Somanath ಅವರಿಗೆ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ಕರೆ ಮಾಡಿ ಅಭಿನಂದಿಸಿದ್ದಾರೆ.
ಈ ಕುರಿತಂತೆ ಮಾತನಾಡಿದ ಇಸ್ರೋ ಅಧ್ಯಕ್ಷ ಸೋಮನಾಥ್ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಕರೆ ಮಾಡಿ ಮಾತನಾಡಿದರು. ನೀವು ಹಾಗೂ ನಿಮ್ಮ ಕುಟುಂಬ ಸಾಧಿಸಿರುವ ಈ ಯಶಸ್ಸಿನ ಬಗ್ಗೆ ಇಡಿಯ ದೇಶವೇ ಹೆಮ್ಮೆ ಪಡುತ್ತದೆ. ವರ್ಷಗಳ ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆತಿದೆ. ಇಸ್ರೋದ ಎಲ್ಲ ವಿಜ್ಞಾನಿಗಳು ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
ಚಂದ್ರಯಾನ-2ರ Chandrayana-2 ಸಮಯದಲ್ಲೂ ಸಹ ನಮ್ಮೊಂದಿಗೆ ಎಲ್ಲ ರೀತಿಯಲ್ಲೂ ಬೆಂಬಲವಾಗಿ ನಿಂತಿದ್ದ ಪ್ರಧಾನಿಯವರು ಚಂದ್ರಯಾನ-3ರ ಆರಂಭದಿಂದಲೂ ಸಹ ನಮ್ಮೊಂದಿಗಿದ್ದಾರೆ. ಪ್ರಧಾನಿಯವರ ಮಾರ್ಗದರ್ಶನ, ಸಹಕಾರ ಹಾಗೂ ಆರ್ಶೀವಾದ ದೊಡ್ಡದು. ಪ್ರಧಾನಿಯವರನ್ನು ಅಭಿನಂದಿಸುತ್ತೇನೆ ಎಂದು ಸೋಮನಾಥ್ ಅವರು ತಿಳಿಸಿದ್ದಾರೆ.
Also read: ಐತಿಹಾಸಿಕ ಕ್ಷಣ ಚಿರಂಜೀವಿ ಚೇತನ: ಚಂದ್ರಯಾನ-3 ಯಶಸ್ಸಿಗೆ ಪ್ರಧಾನಿ ಮೋದಿ ಸಂತಸ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post