ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
2023-24 ನೇ ಸಾಲಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ Shivamogga District Best Teacher Award ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 15, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 14 ಹಾಗೂ ಪ್ರೌಢಶಾಲಾ ವಿಭಾಗದಿಂದ 09 ಒಟ್ಟು 38 ಜನ ಶಿಕ್ಷಕರನ್ನು ಆಯ್ಕೆ ಮಾಡಲಾಗಿರುತ್ತದೆ.
ಸೆಪ್ಟೆಂಬರ್ 5 ರಂದು ಕುವೆಂಪು ರಂಗಮAದಿರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಂದು ಆಯ್ಕೆಯಾದ ಈ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು(ಆಡಳಿತ) ತಿಳಿಸಿದ್ದಾರೆ.
ಶಿಕ್ಷಕರ ಪಟ್ಟಿ-ಕಿರಿಯ ಪ್ರಾಥಮಿಕ ವಿಭಾಗ:
ಗಾಡಿಕೊಪ್ಪ ಕ್ಯಾಂಪ್ ಶಾಲೆಯ ಸಹಶಿಕ್ಷಕರಾದ ಎಸ್. ಚೆಲುವರಾಜ, ರಾಮೇನಕೊಪ್ಪದ ಗೌಸಿಯಾ ಖಾನಂ, ಶಿವಮೊಗ್ಗ ಜ್ಯೋತಿನಗರ ಶಾಲೆಯ ವೈ. ಶೋಭಾ, ಭದ್ರಾವತಿ ಅರಹತೊಳಲು ಶಾಲೆಯ ಕೆ.ಎಂ. ಶಿವಕುಮಾರ್, ಶಿಕಾರಿಪುರ ಚೌಡನಾಯಕನಕೊಪ್ಪ ಶಾಲೆಯ ಎನ್. ರಮೇಶಪ್ಪ, ಸಂಕ್ಲಾಪುರದ ಬಿ. ನಾಗರಾಜಪ್ಪ, ಸಾಗರ ಎಂ.ಕೆ. ಅರಳಿಕೊಪ್ಪದ ಡಿ. ಮನೋಹರಪ್ಪ, ತೀರ್ಥಹಳ್ಳಿ ಹೊಸೂರಿನ ಎಚ್.ಆರ್. ಪೂರ್ಣೇಶ್, ವಿಠ್ಠಲ್ ನಗರದ ಎಸ್. ಲೀಲಾವತಿ, ಹುಲ್ಕೋಡ್ ಭಾಗ್ಯಬಾಯಿ, ರಿಪ್ಪನ್ ಪೇಟೆ ವಿನಾಯಕ ನಗರದ ಸಿ. ತಮ್ಮಪ್ಪ, ಹೊಸನಗರದ ಕಾಗೆಮರಡು ಶಾಲೆಯ ಟಿ. ನೀಲಾವತಿ, ಸೊರಬ ವೃತ್ತಿಕೊಪ್ಪದ ಬಿ. ಹುಚ್ಚರಾಯಪ್ಪ, ಸೊರಬದ ಹೊಸಪೇಟೆ ಹಕ್ಕಲು ಶಾಲೆಯ ಉಮೇಸಲ್ಮಾ, ಕುದರೆಗಣಿಯ ಕೃಷ್ಣವೇಣಿ.
Also read: Leaders of INDI Alliance want to destroy Hindu religion for vote bank and appeasement politics
ಹಿರಿಯ ಪ್ರಾಥಮಿಕ ವಿಭಾಗ
ಶಿವಮೊಗ್ಗ ಬೀರನಕೆರೆಯ ಸಹಶಿಕ್ಷಕರಾದ ಕೆ.ಎಸ್. ಶೋಭಾ, ಭದ್ರಾವತಿ ವಿಶ್ವನಗರದ ಕೆ.ಎನ್. ರಂಗನಾಥ್, ಭದ್ರಾವತಿ ಕಾಗದನಗರದ ಫರಿದುನ್ನೀಸಾ, ಶಿಕಾರಿಪುರ ಈಸೂರಿನ ಕೆ.ವಿ. ಬೆನಕಪ್ಪ, ಮಾರವಳ್ಳಿಯ ಉಮೇಶ್, ಅಮಟೆಕೊಪ್ಪದ ಎಂ. ಗೃಹಲಕ್ಷ್ಮಿ, ತೀರ್ಥಹಳ್ಳಿಯ ನೊಣಬೂರಿನ ಜಿ. ಶಾರದಾಂಬ, ಸೊರಬದ ಹಂಚಿಯ ಆರ್. ವೆಂಕಟೇಶ್, ಶಿವಮೊಗ್ಗ ಲಕ್ಕಿನಕೊಪ್ಪ ಬ.ಮು. ಶಿಕ್ಷಕರಾದ ಅಂಬಿಕಾ, ಭದ್ರಾವತಿ ಎಚ್. ಸಿದ್ಲೀಪುರದ ಎಚ್. ಡಾಕ್ಯಾನಾಯ್ಕ, ಸಾಗರದ ಎ.ಕೆ. ಮಂಜಾಲೆ, ಹೊಸನಗರ ಮೇಲಿನ ಬೆಸಿಗೆಯ ಪಿ. ಶಾರದಾ, ಸೊರಬ ಕೆ. ಕಮರೂರಿನ ಪ್ರ.ಮು. ಶಿಕ್ಷಕ ರಮೇಶ್ ಎನ್. ಹೆಗಡೆ, ಸಾಗರದ ದೈಹಿಕ ಶಿಕ್ಷಣ ಶಿಕ್ಷಕ ಕೆ. ಬಸವರಾಜ.
ಪ್ರೌಢಶಾಲಾ ವಿಭಾಗ
ಶಿವಮೊಗ್ಗ ಬಿ.ಎಚ್. ರಸ್ತೆ ಶಾಲೆಯ ಸಹ ಶಿಕ್ಷಕ ಆರ್. ರಂಗಪ್ಪ, ಭದ್ರಾವತಿ ಅರಕೇರೆ ಶಾಲೆಯ ಬಬಿತಾಕುಮಾರಿ, ಸಾಗರ ಕಟ್ಟಿನಕಾರು ಶಾಲೆಯ ಎಂ.ಜಿ. ಹರಿಪ್ರಸಾದ್, ತೀರ್ಥಹಳ್ಳಿ ಕಟ್ಟೆಹಕ್ಲು ಶಾಲೆಯ ಎಚ್.ಆರ್. ಶ್ರೀಧರ್, ಹೊಸನಗರ ಜಯನಗರದ ಎಂ. ಸುರೇಂದ್ರ, ಶಿಕಾರಿಪುರ ಚಿಕ್ಕಜಂಬೂರು ಶಾಲೆಯ ಮುಖ್ಯಶಿಕ್ಷಕರಾದ ಎಲ್. ಮಾಲತೇಶ್ವರ್, ಸಾಗರದ ದತ್ತಾತ್ರೇಯ ಭಟ್, ಹೊಸಬಾಳೆಯ ಕೆ. ಮಂಜಪ್ಪ, ಶಿಕಾರಿಪುರ ಹೊಸಮುಗಳಗೆರೆ ಶಾಲೆಯ ದೈಹಿಕ ಶಿಕ್ಷಕರಾದ ಎ.ಬಿ. ಪುಟ್ಟಪ್ಪ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post