ಕಲ್ಪ ಮೀಡಿಯಾ ಹೌಸ್ | ಪುತ್ತೂರು |
ಇಲ್ಲಿನ ಶ್ರೀ ಮರಾಠ ಗಣೇಶ್ ಉತ್ಸವ್ ಮಂಡಲ್’ನ ಶೋಭಾಯಾತ್ರೆಯಲ್ಲಿ ನಡೆದ ಕುದುರೆಗಳ ನೃತ್ಯ ಇಡಿಯ ನಗರದ ಜನರನ್ನು ಆಶ್ಚರ್ಯಚಕಿತಗೊಳಿಸಿತು.
ಶ್ರೀ ಮರಾಠ ಗಣೇಶ್ ಉತ್ಸವ್ ಮಂಡಲ್ ವತಿಯಿಂದ ನಗರದಲ್ಲಿ ಅದ್ದೂರಿಯಾಗಿ ಶೋಭಯಾತ್ರೆಯನ್ನು ಆಯೋಜನೆ ಮಾಡಲಾಗಿತ್ತು. ಈ ಅಂಗವಾಗಿ ವಿವಿಧ ಸಾಂಸ್ಕೃತಿಕ ನೃತ್ಯಗಳು ಹಾಗೂ ಕಲಾಪ್ರಕಾರಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಅತ್ಯಂತ ಪ್ರಮುಖವಾಗಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಶ್ವೇತವರ್ಣದ ಕುದುರೆಗಳ ತನ್ನ ಯಜಮಾನ ಆಜ್ಞೆಯಂತೆ ನೃತ್ಯಗಳನ್ನು ಮಾಡಿದ್ದು ವಿಶೇಷವಾಗಿತ್ತು.
ವಿವಿಧ ಭಂಗಿಯಲ್ಲಿ ಕುದುರೆಗಳು ನೃತ್ಯ ಮಾಡಿದ್ದು ನೆರೆದಿದ್ದ ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದ್ದು, ಮೆಚ್ಚುಗೆಗೂ ಸಹ ಪಾತ್ರವಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post