ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದ ಸುಪ್ರೀಂ ಕೋರ್ಟ್ Supreme Court ಇತಿಹಾಸದಲ್ಲಿ ನಿನ್ನೆ ಅಪರೂಪದ ಘಟನೆ ನಡೆದಿದ್ದು, ಇದು ಐತಿಹಾಸಿಕ ಕ್ಷಣವಾಗಿ ದಾಖಲಾಗಿದೆ.
ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಮೊತ್ತಮೊದಲ ಬಾರಿಗೆ ಕಿವುಡ ಮತ್ತು ಮೂಕ ವಕೀಲರೊಬ್ಬರು ಸುಪ್ರೀಂಕೋರ್ಟ್ ಗೆ ಹಾಜರಾಗಿದ್ದು, ಈ ಮೂಲಕ ದೇಶದ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಸಾರಾ ಸನ್ನಿ ಕಿವುಡ ವಕೀಲರಾಗಿ ನೋಂದಾಯಿಸಲ್ಪಟ್ಟ ಭಾರತದ ಮೊದಲ ವಕೀಲರಾಗಿದ್ದಾರೆ.
ವಕೀಲೆ ಸಾರಾ ಸನ್ನಿಇಂಟರ್ ಪ್ರಿಂಟರ್ ಮೂಲಕ ಸಂಜ್ಞೆ ಭಾಷೆ ಬಳಸಿ ವಾದಿಸಿದ ಪ್ರಕರಣವನ್ನು ಸೋಮವಾರ ಸುಪ್ರೀಂ ಕೋರ್ಟ್ ಮೊದಲ ಬಾರಿಗೆ ಆಲಿಸಿತು.
ವಾದ ಮಂಡಿಸಿದ್ದು ಹೇಗೆ?
ಆರಂಭದಲ್ಲಿ ವರ್ಚುವಲ್ ಪ್ರೊಸೀಡಿಂಗ್ಸ್ ನಿರ್ವಹಿಸುತ್ತಿದ್ದ ಕಂಟ್ರೋಲ್ ರೂಂ ಸಾರಾ ಸನ್ನಿಗೆ ಸ್ಕ್ರೀನ್ ಸ್ಪೇಸ್ ನೀಡಲು ನಿರಾಕರಿಸಿತ್ತು.
Also read: ಭದ್ರಾವತಿ ವಿಐಎಸ್’ಎಲ್ ಆವರಣದಲ್ಲಿ ಬೋನಿಗೆ ಬಿದ್ದ ಚಿರತೆ
ಆದರೆ, ಶೀಘ್ರದಲ್ಲೇ ಅವರ ವಿಚಾರಣೆಯ ಸರದಿ ಬಂದಾಗ ಆಕೆಯ ಇಂಟರ್‌ಪ್ರಿಂಟರ್ ಸೌರಭ್ ರಾಯ್ ಚೌಧರಿ ಪರದೆಯ ಮೇಲೆ ಕಾಣಿಸಿಕೊಂಡರು.
ಈ ವೇಳೆ ಸಿಜೆಐ ಚಂದ್ರಚೂಡ್ ಅವರ ಮಾತುಗಳನ್ನು ತಾಳ್ಮೆಯಿಂದ ಆಲಿಸಿದರು. ಅಲ್ಲದೇ, ಖಂಡಿತವಾಗಿ ಇಂಟರ್‌ಪ್ರಿAಟರ್ ವಿಚಾರಣೆಗೆ ಸೇರಿಸಬಹುದು ತೊಂದರೆಯಿಲ್ಲ ಎಂದು ಹೇಳುವ ಮೂಲಕ ಇಂಟರ್‌ಪ್ರಿಂಟರ್ ಅನ್ನು ಸ್ವಾಗತಿಸಿದರು.
ಚೌಧರಿ ಅವರು, ಸಾರಾ ಸನ್ನಿ ಅವರ ಸಂಕೇತ ಭಾಷೆಯನ್ನು ಅನುವಾದಿಸಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರ ಮುಂದೆ ತಮ್ಮ ವಾದವನ್ನು ಮಂಡಿಸಿದರು.
ನಂತರ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸನ್ನಿಗೆ ಸ್ಕ್ರೀನ್ ಸ್ಪೇಸ್ ನೀಡುವಂತೆ ನಿಯಂತ್ರಣ ಕೊಠಡಿ ಮತ್ತು ಇಂಟರ್ ಪ್ರಿಂಟರ್’ಗೆ ಸೂಚನೆ ನೀಡಿದರು. ಇದಾದ ಬಳಿಕ ಇಬ್ಬರೂ ತೆರೆ ಮೇಲೆ ಕಾಣಿಸಿಕೊಂಡು ಸುಪ್ರೀಂ ಕೋರ್ಟ್’ನಲ್ಲಿ ತಮ್ಮ ವಾದ ಮಂಡಿಸಿದರು. ಸನ್ನಿ ಅವರು ಕಲಾಪದಲ್ಲಿ ಪಾಲ್ಗೊಳ್ಳಲು ನ್ಯಾಯವಾದಿ ಸಂಚಿತ್ ಐನ್ ಅವರು ಅರೆಂಜ್ ಮಾಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post