ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸೋಗಾನೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಬೇಕಾಗಿದ್ದ ಇಂಡಿಗೋ ವಿಮಾನ Indigo ಹವಾಮಾನ ವೈಪರೀತ್ಯದ ಕಾರಣದಿಂದ ವಾಪಾಸ್ ತೆರಳಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ Bangalore International Airport ಆಗಿರುವ ಘಟನೆ ನಡೆದಿದೆ.
ಕಳೆದ ಭಾನುವಾರ ಘಟನೆ ನಡೆದಿದ್ದು, ಮುಂಜಾನೆ ಶಿವಮೊಗ್ಗ ತಲುಪಬೇಕಿದ್ದ ವಿಮಾನ ಬೆಂಗಳೂರಿಗೆ ತೆರಳಿ ಲ್ಯಾಂಡ್ ಆಗಿದೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕಳೆದ ಭಾನುವಾರ ಆಗಮಿಸಿದ ವಿಮಾನ, ಹವಾಮಾನ ವೈಪರೀತ್ಯದಿಂದಾತಗಿ ಲ್ಯಾಂಡ್ ಆಗಲು ಸಾಧ್ಯವಾಗಲಿಲ್ಲ.
ಶಿವಮೊಗ್ಗ ಏರ್ ಪೋರ್ಟ್’ನಲ್ಲಿ Shivamogga Airport ತುಂತುರು ಮಳೆಯಾಗುತ್ತಿದ್ದ ಜೊತೆಯಲ್ಲಿ, ಭಾರೀ ಪ್ರಮಾಣದಲ್ಲಿ ಮೋಡ ಆವರಿಸಿತ್ತು. ಹೀಗಾಗಿ ರನ್ ವೇ ಕಾಣದ ಹಿನ್ನೆಲೆಯಲ್ಲಿ ಇಂಡಿಗೋ ವಿಮಾನ ವಿಮಾನ ನಿಲ್ದಾಣದ ಸುತ್ತ ಕೆಲ ಕಾಲ ಹಾರಾಟ ನಡೆಸಿದೆ.
Also read: ಶಿವಮೊಗ್ಗ ರಾಗಿಗುಡ್ಡ ಘಟನೆ ಬಗ್ಗೆ ಗೃಹ ಸಚಿವರ ಉಡಾಫೆ ಉತ್ತರಕ್ಕೆ ಆಕ್ರೋಶ
ಬಹಳ ಸಮಯ ಹಾರಾಟ ನಡೆಸಿ ಪ್ರಯತ್ನಿಸಿದರೂ ಲ್ಯಾಂಡ್ ಆಗಲು ರನ್’ವೇ ಕಾಣದ ಹಿನ್ನೆಲೆಯಲ್ಲಿ ವಾಪಸ್ ಬೆಂಗಳೂರಿಗೆ ಹೋಗಿದೆ. ಅಲ್ಲಿ ಲ್ಯಾಂಡ್ ಆದ ವಿಮಾನ 20 ನಿಮಿಷ ಉಳಿದು ಆನಂತರ ಮತ್ತೆ ಶಿವಮೊಗ್ಗದ ಕಡೆಗೆ ಹಾರಾಟ ನಡೆಸಿದೆ. ಶಿವಮೊಗ್ಗ ಏರ್’ಪೋರ್ಟ್’ಗೆ ವಾಪಸ್ ಬಂದು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಬೆಂಗಳೂರಿನಿಂದ ಶಿವಮೊಗ್ಗ ಏರ್’ಪೋರ್ಟ್’ ಬೆಳಗ್ಗೆ 10.45ರ ಸುಮಾರಿಗೆ ವಿಮಾನ 10 ನಿಮಿಷ ಆಕಾಶದಲ್ಲಿ ಹಾರಾಟ ನಡೆಸಿತು. ಆನಂತರ ಬೆಂಗಳೂರಿಗೆ ತೆರಳಿತು. ಅಲ್ಲಿಂದ ಮಧ್ಯಾಹ್ನ 1.52ಕ್ಕೆ ಶಿವಮೊಗ್ಗ ಏರ್’ಪೋರ್ಟ್’ಗೆ ಬಂದು ವಿಮಾನವನ್ನು ಇಳಿಸಲಾಯ್ತು. ಬಳಿಕ 2.29ಕ್ಕೆ ಶಿವಮೊಗ್ಗದಿಂದ ಪ್ರಯಾಣಿಕರನ್ನು ಹೊತ್ತು ಬೆಂಗಳೂರಿಗೆ ತೆರಳಿತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















