ಕಲ್ಪ ಮೀಡಿಯಾ ಹೌಸ್ | ಹೊಳೆಹೊನ್ನೂರು |
ಕೆಎಸ್’ಆರ್’ಟಿಸಿ ಬಸ್’ನಲ್ಲಿ #KSRTC ಟಿಕೇಟ್ ಖದೀದಿಸಿ ಎಂದು ಕೇಳಿದ ಕ್ಷುಲ್ಲಕ ಕಾರಣಕ್ಕಾಗಿ ಕಂಡಕ್ಟರ್ ಮೇಲೆ ಪುಂಡರ ಗುಂಪೊಂದು ಹಲ್ಲೆ ನಡೆಸಿದ್ದು, ಇದನ್ನು ತಡೆಯಲು ಧಾವಿಸಿದ ಪ್ರಯಾಣಿಕರ ಮೇಲೂ ಸಹ ದೌರ್ಜನ್ಯ ನಡೆಸಿರುವ ಘಟನೆ ನಡೆದಿದೆ.
ಚಿತ್ರದುರ್ಗದಿಂದ #Chitradurga ಶಿವಮೊಗ್ಗಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್’ಗೆ #BUS ಚನ್ನಗಿರಿ ಬಳಿಯ ಮಾವಿನಕಟ್ಟೆಯಲ್ಲಿ ಓರ್ವ ಯುವಕ ಹತ್ತಿದ್ದಾನೆ. ಈ ವೇಳೆ ಟಿಕೇಟ್ ತೆಗೆದುಕೊಳ್ಳುವಂತೆ ಹೇಳಿದ್ದಾರೆ. ಆದರೆ, ಟಿಕೇಟ್ ತೆಗೆದುಕೊಳ್ಳಲು ನಿರಾಕರಿಸಿದ ಆತ ಕಂಡಕ್ಟರ್ ಜೊತೆಯಲ್ಲಿ ವಾಗ್ವಾದ ಮಾಡಿದ್ದಾನೆ.
ಅಲ್ಲದೇ ಹಲ್ಲೆ ಸಹ ನಡೆಸಿದ್ದಾನೆ. ಈ ಘಟನೆಯನ್ನು ಮೊಬೈಲ್’ನಲ್ಲಿ ವೀಡಿಯೋ ಮಾಡಿಕೊಂಡು ಕಂಡಕ್ಟರ್ ರಕ್ಷಣೆಗೆ ಮುಂದಾದ ಯುವಕನೊಬ್ಬನ ಮೇಲೂ ಸಹ ಈತ ಹಲ್ಲೆ ನಡೆಸಿದ್ದು, ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದಾನೆ.
ಇಲ್ಲಿಗೆ ಸುಮ್ಮನಾಗದ ಆ ಯುವಕ ಫೋನ್ ಮಾಡಿ ತನ್ನ ಸ್ನೇಹಿತರಿಗೆ ತಿಳಿಸಿದ್ದು, ಅರಹತೊಳಲು ಬಳಿಯಲ್ಲಿ ಮತ್ತಿಬ್ಬರು ಹತ್ತಿಕೊಂಡಿದ್ದಾರೆ. ಆನಂತರ ಎಲ್ಲರೂ ಸೇರಿಕೊಂಡು ಕಂಡಕ್ಟರ್ ಹಾಗೂ ವೀಡಿಯೋ ಮಾಡಿದ ಯುವಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಪ್ರಯಾಣಿಕರು, ಕಂಡಕ್ಟರ್ ಬಳಿ ಇದ್ದ ಮೊಬೈಲ್, ಹಣ ಕಸಿದುಕೊಂಡಿದ್ದರು ಎಂದು ಆಪಾದಿಸಲಾಗಿದೆ.
ಎಲ್ಲಿಯು ಬಸ್ ನಿಲ್ಲಿಸದಂತೆ ಯುವಕರು ಡ್ರೈವರ್’ಗೆ ತಾಕೀತು ಮಾಡಿದ್ದರು. ಆದರೆ ಸಮಯ ಪ್ರಜ್ಞೆ ಮೆರೆದ ಚಾಲಕ ಹೊಳೆಹೊನ್ನೂರು ಪೊಲೀಸ್ ಠಾಣೆ ಎದುರಿಗೆ ತಂದು ನಿಲ್ಲಿಸಿದ್ದಾರೆ. ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದಿದ್ದರು. ಸಹ ಪ್ರಯಾಣಿಕರಿಂದ ಕಸಿದುಕೊಂಡಿದ್ದ ಮೊಬೈಲ್, ಹಣವನ್ನು ಪೊಲೀಸರು ಮರಳಿ ಕೊಡಿಸಿದ್ದಾರೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post