ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಬೆಂಗಳೂರಿನ ಪೈಪ್ಲೈನ್ ರಸ್ತೆಯ ಚೋಳರಪಾಳ್ಯದಲ್ಲಿ ಇರುವ ಅಗರಬತ್ತಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ ಪರಿಣಾಮ ಎಂಟು ಬೈಕ್‌ಗಳು ಅಗ್ನಿಗಾಹುತಿಯಾಗಿವೆ.
ಕಳೆದ ಐದು ವರ್ಷಗಳಿಂದ ಗುಡಿಕೈಗಾರಿಕೆ ರೀತಿ ಮನೆಯಲ್ಲೇ ಅಗರಬತ್ತಿ ಕಾರ್ಖಾನೆ ನಡೆಲಾಗುತ್ತಿದ್ದು, ಗ್ರೌಂಡ್ ಫ್ಲೋರ್ನಲ್ಲಿ ಅಗರಬತ್ತಿ ತಯಾರಿಕೆಗೆ ಬೇಕಾಗಿದ್ದ ರಾಸಾಯನಿಕಗಳನ್ನು ಶೇಕರಿಸಿಡಲಾಗಿತ್ತು. ಆಕಸ್ಮಿಕವಾಗಿ ಹತ್ತಿಕೊಂಡ ಬೆಂಕಿಯಿಂದಾಗಿ ರಾಸಾಯನಿಕಗಳಿದ್ದ ಬಾಕ್ಸ್ಗಳು ಬ್ಲಾಸ್ಟ್ ಆಗಿ ರಾಸಾಯನಿಗಳು ರಸ್ತೆಗೆ ಹರಿದ ಪರಿಣಾಮ ರಸ್ತೆಗೂ ಬೆಂಕಿ ಆವರಿಸಿ, ಮನೆ ಮುಂದೆ ನಿಲ್ಲಿಸಿದ್ದ ಎಂಟು ಬೈಕ್‌ಗಳು ಸುಟ್ಟು ಭಸ್ಮವಾಗಿವೆ.
ವಿಜಯನಗರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Also read: ಕುಡಿದ ಮತ್ತಿನಲ್ಲಿ ಪತ್ನಿ ಕೊಲೆ: ಆರೋಪಿ ಪೊಲೀಸ್ ವಶಕ್ಕೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post