ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನವಂಬರ್ 1ರಂದು ಮಾತ್ರ ಕನ್ನಡಕ್ಕೆ ಆದ್ಯತೆ ನೀಡದೆ ಪ್ರತಿನಿತ್ಯ ಕನ್ನಡವನ್ನು ಆರಾಧಿಸಬೇಕು ಎಂದು ಶಾಲೆಯ ಪ್ರಾಂಶುಪಾಲರಾದ ಪ್ರಿಯದರ್ಶಿನಿ ಆಶಿಸಿದರು.
ನಗರದ ಜೈನ್ ಪಬ್ಲಿಕ್ Jain Public ಶಾಲೆಯ ಆವರಣದಲ್ಲಿ ಆಯೋಜಿಸಲಾಗಿದ್ದ 68ನೇ ಕನ್ನಡ ರಾಜ್ಯೋತ್ಸವ Kannada Rajyothsava ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕನ್ನಡವನ್ನು ಉಳಿಸಿ ಬೆಳೆಸಬೇಕು. ಕನ್ನಡಕ್ಕೆ ಬೇರೆ ಭಾಷೆಯನ್ನು ಬಳಸದೆ ಸ್ಪಷ್ಟ ಕನ್ನಡವನ್ನು ಬಳಕೆ ಮಾಡಬೇಕು ಹಾಗೂ ಕನ್ನಡದ ವೈಶಿಷ್ಟ್ಯತೆಯ ಬಗ್ಗೆ ತಿಳಿದುಕೊಂಡು ಕನ್ನಡದ ಮಣ್ಣಿನಲ್ಲಿ ನೆಲೆಸಿದ ನಾವು ಕನ್ನಡ ನಾಡಿನ ಬಗ್ಗೆ ಹೆಮ್ಮೆಪಡಬೇಕು ಎಂದರು.
Also read: ಸೊರಬದಲ್ಲೊಂದು ಪ್ರಕರಣ | ಕಾಡು ಕೋಣ ಬೇಟೆ | ಪ್ರಾಣಿ ಭಕ್ಷಕ ಮುನೀರ್ ಬಂಧನ
ಕಾರ್ಯಕ್ರಮವನ್ನು ಹೊತ್ತಿತೋ ಹೊತ್ತಿತೋ ಕನ್ನಡದ ದೀಪ ಹಾಡಿನಿಂದ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕನ್ನಡ ರಾಜ್ಯೋತ್ಸವವನ್ನು ಪ್ರಾರಂಭಿಸಿ, ಕರ್ನಾಟಕ ಏಕೀಕರಣದ ಬಗ್ಗೆ ಶಿಕ್ಷಕರು ಅದ್ಭುತವಾಗಿ ಮಾಹಿತಿಯನ್ನು ನೀಡಿದರು.
ನಂತರ ಕನ್ನಡಾಂಬೆಯನ್ನು ಸ್ಮರಿಸಿ ಪೂಜೆ ಸಲ್ಲಿಸಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಸಂಯೋಜಕರು ದಿವ್ಯಶೆಟ್ಟಿ, ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ವರ್ಗದವರು ಪಾಲ್ಗೊಂಡಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















