ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಜನರಿಗೆ ರಕ್ಷಣೆ ಒದಗಿಸುವ ಜವಾಬ್ದಾರಿ ಹೊತ್ತ ಪೊಲೀಸ್ ಪೇದೆಯೊಬ್ಬ ರಾತ್ರಿ ವೇಳೆ ರೈಲು ಪ್ರಯಾಣಿಕರನ್ನು ದೋಚುತ್ತಿದ್ದ ಪ್ರಸಂಗವೊಂದು ಬಯಲಿಗೆ ಬಂದಿದೆ.
ಹೌದು… ಸಿದ್ದರಾಮರೆಡ್ಡಿ ಎಂಬಾತ ಚಿಕ್ಕಬಳ್ಳಾಪುರ ರೈಲ್ವೆ ಹೊರ ಠಾಣೆ ಮುಖ್ಯಪೇದೆಯಾಗಿ ಕೆಲಸ ನಿರ್ವಹಿಸುತ್ತಿದ್ದ. ಹಗಲು ಪೊಲೀಸ್ ಕೆಲಸ ಮಾಡುತ್ತಿದ್ದ ಈಗ ರಾತ್ರಿಯಾದರೆ ಕಳ್ಳತನಕ್ಕೆ ಇಳಿಯುತ್ತಿದ್ದ. ಮಧ್ಯರಾತ್ರಿಯಾದರೆ ಸಾಕು ರೈಲ್ವೆ ನಿಲ್ದಾಣಗಳಲ್ಲಿ ಕಳ್ಳತನ ಮಾಡುತ್ತಿದ್ದ ಈಗ ಇದಕ್ಕಾಗಿ ಸಾಬಣ್ಣ ಎಂಬಾತನನ್ನು ಕಳ್ಳತನ ಮಾಡಲು ಇಟ್ಟುಕೊಂಡಿದ್ದ.
ಯಾರು ಈತನ ಟಾರ್ಗೆಟ್?
ಮಧ್ಯರಾತ್ರಿಯ ವೇಳೆ ಕೇರಳ ಹಾಗೂ ತಮಿಳುನಾಡು ಮೂಲದ ಪ್ರಯಾಣಿಕರನ್ನು ಈತ ಟಾರ್ಗೆಟ್ ಮಾಡಿಕೊಂಡಿದ್ದ ಎನ್ನಲಾಗಿದೆ.
ಸಾಬಣ್ಣನ ಮೂಲಕ ಪ್ರಯಾಣಿಕರ ನಗದು ಹಾಗೂ ಚಿನ್ನಾಭರಣಗಳನ್ನು ಕಳುವು ಮಾಡಿಸುತ್ತಿದ್ದ. ಈ ಕುರಿತು ಸ್ಥಳೀಯ ರೈಲ್ವೇ ಠಾಣೆಗಳಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಪೊಲೀಸರು ಆರೋಪಿ ಪೊಲೀಸ್ ಪೇದೆಯನ್ನು ಬಂಧಿಸುವಲ್ಲಿ ಯಶಸ್ಸಿಯಾಗಿದ್ದಾರೆ.
ಬೆಂಗಳೂರಿನ ರೈಲು ನಿಲ್ದಾಣ ಹಾಗೂ ಬೈಯಪ್ಪನಹಳ್ಳಿ ರೈಲ್ ಸೇರಿದಂತೆ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪೇದೆ ಕಳ್ಳತನ ಮಾಡಿದ್ದಾನೆ ಎನ್ನಲಾಗಿದೆ. ಇನ್ನು ಈ ವಿಚಾರ ಬಯಲಾಗುತ್ತಿದ್ದಂತೆಯೇ ಆರೋಪಿಯನ್ನು ಇಲಾಖೆಯಿಂದ ಅಮಾನತು ಮಾಡಲಾಗಿದೆ. ಇದೀಗ ಕಳ್ಳತನ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















