ಕಲ್ಪ ಮೀಡಿಯಾ ಹೌಸ್ | ತರೀಕೆರೆ |
ಪಟಾಕಿ ಸಿಡಿತಕ್ಕೆ ನೆಲದಿಂದ 5 ಆಡಿ ಹಾರಿ ಬಿದ್ದ ಯುವಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ.
ತಾಲೂಕಿನ ಸುಣ್ಣದಹಳ್ಳಿಯಲ್ಲಿ ಘಟನೆ ನಡೆದಿದ್ದು, ಮೃತ ಯುವಕನನ್ನು ಪ್ರದೀಪ್(30 ಎಂದು ಗುರುತಿಸಲಾಗಿದೆ.
ಆಟಂಬಾಂಬ್ ಎಂಬ ಪಟಾಕಿಯನ್ನು ಕುರ್ಚಿಯ ಕೆಳಗೆ ಇಟ್ಟುಕೊಂಡು ಅದರ ಮೇಲೆ ಪ್ರದೀಪ್ ಕುಳಿತಿದ್ದರು. ಪಟಾಕಿ ಸಿಡಿತದ ರಭಸಕ್ಕೆ ಪ್ರದೀಪ್ ಸುಮಾರು 4-5 ಅಡಿಗಳಷ್ಟು ಎತ್ತರಕ್ಕೆ ಹಾರಿ ಕೆಳಕ್ಕೆ ಬಿದ್ದಿದ್ದು, ದೇಹದ ಸೂಕ್ಷ್ಮ ಭಾಗಕ್ಕೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗಿದೆ.
Also read: ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಅಧಿಕಾರ ಸ್ವೀಕಾರ: ಯಡಿಯೂರಪ್ಪ ಹೇಳಿದ್ದೇನು?
ಪಟಾಕಿ ಸಿಡಿತದ ವೇಳೆ ಪಕ್ಕದಲ್ಲೇ ಇದ್ದ ಇನ್ನೊಬ್ಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















