ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೀಪಾವಳಿ Dipavali ಹಬ್ಬದ ದೀಪಾಲಂಕಾರಕ್ಕೆ ಅನುಮತಿ ಪಡೆಯದೇ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂಬ ಕಾರಣಕ್ಕಾಗಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ HDKumaraswamy ಅವರಿಗೆ ಬೆಸ್ಕಾಂ ವಿಧಿಸಿದ್ದ 68 ಸಾವಿರ ರೂ. ದಂಡ ಮೊತ್ತವನ್ನು ಅವರು ಪಾವತಿಸಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಎಚ್.ಡಿ. ಕುಮಾರಸ್ವಾಮಿ, 71 ಯೂನಿಟ್ ವಿದ್ಯುತ್’ಗೆ 3 ಪಟ್ಟು ದಂಡ ವಿಧಿಸಿದ್ದು, ಒಟ್ಟು 2,526 ರೂಪಾಯಿ ದಂಡ ಹಾಕಬೇಕಿತ್ತು. ಆದರೆ ನನ್ನ ಮನೆಗೆ ತೆಗೆದುಕೊಂಡಿರುವ 33 ಕೆವಿ ವಿದ್ಯುತ್ ಬಳಕೆ ಸೇರಿ 68,526 ರೂ. ದಂಡ ವಿಧಿಸಿದ್ದಾರೆ. ಒಬ್ಬ ಮಾಜಿ ಸಿಎಂಗೆ ಹೀಗೆ ಆದರೆ ಸಾಮಾನ್ಯ ಜನರಿಗೆ ಕಥೆ ಏನು ಎಂದು ಪ್ರಶ್ನೆ ಮಾಡಿದ್ದಾರೆ.

Also read: ಪೆಟ್ರೋಲ್ ಟ್ಯಾಂಕರ್-ಕಾರು ನಡುವೆ ಭೀಕರ ಅಪಘಾತ: ಐವರು ಸಾವು
ಲುಲು ಮಾಲ್ ವಿರುದ್ಧ ಕ್ರಮಗೊಳ್ಳುತ್ತಾರಾ?
ಲುಲು ಮಾಲ್ ಆರು ತಿಂಗಳಿನಿಂದ ಕರೆಂಟ್ ಬಿಲ್ ಕಟ್ಟಿಲ್ಲ. ಅಲ್ಲದೇ, ಮಾಲ್ ಆರಂಭಕ್ಕೂ ಮುನ್ನ ಬಳಸಿದ 6 ತಿಂಗಳ ವಿದ್ಯುತ್’ಗೂ ಸಹ ಬಿಲ್ ಹಾಕುತ್ತಾರಾ? ನನ್ನನ್ನು ಕಳ್ಳ ಎಂದು ಕರೆದವರು ಈ ಮಾಲ್ ವಿರುದ್ಧ ಕ್ರಮ ಕೈಗೊಳ್ಳುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post