ಕಲ್ಪ ಮೀಡಿಯಾ ಹೌಸ್ | ಉತ್ತರ ಪ್ರದೇಶ |
ಬೇಕರಿಯಿಂದ ಖರೀದಿಸಿ ತಂದಿದ್ದ ಸಮೋಸಾ Samosa ತಿಂದ ಬಾಲಕಿ ಅಸ್ವಸ್ಥಗೊಂಡಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉತ್ತರ ಪ್ರದೇಶದ ಮೊಹಲ್ಲಾ ನ್ಯೂ ಆರ್ಯ ನಗರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಜನರನ್ನು ಬೆಚ್ಚಿ ಬೀಳಿಸಿದೆ.
ಸಮೋಸಾದಲ್ಲಿ ಏನಿತ್ತು?
ಹಬ್ಬದ ಸಂದರ್ಭ ಮನೆಗೆ ಅತಿಥಿಗಳು ಅಗಮಿಸಿದ ಕಾರಣ ವ್ಯಕ್ತಿಯೊಬ್ಬರು ಹಾಪುರದ ಚಂಡಿ ರಸ್ತೆಯಲ್ಲಿರುವ ಸ್ವೀಟ್ ಅಂಗಡಿಯಿಂದ ಸಮೋಸಗಳನ್ನು ಖರೀದಿಸಿ ಮನೆಗೆ ತಂದಿದ್ದಾರೆ.
ಹಬ್ಬಕ್ಕಾಗಿ ಮನೆಗೆ ಬಂದ ಅತಿಥಿಗಳಿಗೆ ಈ ಸಮೋಸಾವನ್ನು ನೀಡಿದ್ದರು. ಆದರೆ ಸಮೋಸಾವನ್ನು ತಿನ್ನುತ್ತಿದ್ದ ವ್ಯಕ್ತಿಯೊಬ್ಬ ತನ್ನ ಸಮೋಸಾದಲ್ಲಿ ಹಲ್ಲಿಯಿರೋದನ್ನು ಗಮನಿಸಿದ್ದಾನೆ. ಸಮೋಸಾ ತಿಂದ 13 ವರ್ಷದ ಬಾಲಕಿ ಅಸ್ವಸ್ಥಳಾಗಿದ್ದು, ಘಟನೆ ಬಳಿಕ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
Also read: ಬೆಸ್ಕಾಂಗೆ ಮಾಜಿ ಸಿಎಂ ಕುಮಾರಸ್ವಾಮಿ ಪಾವತಿಸಿದ ದಂಡ ಮೊತ್ತವೆಷ್ಟು?
ಸಂತ್ರಸ್ತೆಯ ಮನೆಯಲ್ಲಿದ್ದ ಸಂಬಂಧಿಕರು ಸಮೋಸಾದಲ್ಲಿ ಹಲ್ಲಿ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದು, ಘಟನೆಗೆ ಸಂಬಂಧಿಸಿದ ವೀಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಘಟನೆಯ ಸಂಬಂಧ ಕುಟುಂಬದವರು ದೂರು ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸಿ ಸ್ವೀಟ್ ಅಂಗಡಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತ ಕುಟುಂಬದವರು ಆಗ್ರಹಿಸಿದ್ದಾರೆ. ಈ ಸಂಬAಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post