ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಸಂಬAಧಿಸಿದAತೆ ನಗರದ ಶಿಕ್ಷಕಿಯೊಬ್ಬರಿಗೆ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ಕನ್ನಡದಲ್ಲೇ ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ.
ಎಂಎಸ್, ಬಿಎಜೆಸಿ, ಬಿಎಡ್, ಇಸಿಸಿ, ಇಡಿ ವಿದ್ಯಾರ್ಹತೆ ಹೊಂದಿರುವ ಶಿವಮೊಗ್ಗ ಮೂಲದ ಅರ್ಪಿತಾ ಶೆಟ್ಟಿ ಅವರು ಬೆಂಗಳೂರಿನ ಪ್ರತಿಷ್ಠಿತ ಎಪಿಎಸ್ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಕಾಲೇಜಿನ ಸಮಾಜಶಾಸ್ತç ಹಾಗೂ ಮನೋವಿಜ್ಞಾನ ವಿಭಾಗದಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅರ್ಪಿತಾ ಶೆಟ್ಟಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಯಾಗಿ ಅರ್ಪಿತಾ ಅವರನ್ನು ಅಭಿನಂದಿಸಿ ಪ್ರಧಾನಿಯವರು ಕನ್ನಡದಲ್ಲೇ ಪತ್ರ ಬರೆದಿರುವುದು ವಿಶೇಷವಾಗಿದೆ.
Also read: ಡಿವಿಎಸ್ ಕಾಲೇಜಿನಲ್ಲಿ ಇಂಧನರಹಿತ ಅಡುಗೆ ಸ್ಪರ್ಧೆ | ವಿದ್ಯಾರ್ಥಿಗಳು ಏನೆಲ್ಲಾ ತಯಾರಿಸಿದ್ದರು?
ಪ್ರಧಾನಿಯವರ ಪತ್ರದ ಸಾರಾಂಶ,
ಶ್ರೀಮತಿ ಅರ್ಪಿತಾ ಶೆಟ್ಟಿ ಅವರೇ,
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆನಿಮ್ಮ ಮತ್ತು ಇತರ ಶಿಕ್ಷಕ ಸಹೋದ್ಯೋಗಿಗಳ ಆಲೋಚನೆಗಳನ್ನು ಸ್ವೀಕರಿಸಲು ನನಗೆ ಸಂತೋಷವಾಗಿದೆ. ಇದಕ್ಕಾಗಿ ನಿಮಗೆ ಧನ್ಯವಾದಗಳು, ರಾಷ್ಟç ಮತ್ತು ವಿದ್ಯಾರ್ಥಿಗಳ ಅಭಿವೃದ್ಧಿಯ ಬಗ್ಗೆ ನಿಮ್ಮ ಅಭಿಪ್ರಾಯಗಳು ಅಮೂಲ್ಯವಾಗಿದೆ.
ಕನಸು ಕಾಣುವುದನ್ನು ಕಲಿಸುವ ಮತ್ತು ಆ ಕನಸುಗಳನ್ನು ಸಂಕಲ್ಪಗಳಾಗಿ ಪರಿವರ್ತಿಸುವ ಮೂಲಕ ನನಸಾಗಿಸಲು ಸಹಾಯ ಮಾಡುವ ಶಿಕ್ಷಕರು ವಿದ್ಯಾರ್ಥಿಗಳ ಜೀವನದಲ್ಲಿ ದಾರಿ ದೀಪದಂತಿರುತ್ತಾರೆ. ವಿದ್ಯಾರ್ಥಿಗಳ ವ್ಯಕ್ತಿತ್ವದಲ್ಲಿ ಶಿಕ್ಷಕರು ತುಂಬುವ ಸಕಾರಾತ್ಮಕತೆ ಮತ್ತು ಆತ್ಮ ವಿಶ್ವಾಸ ಜೀವನದುದ್ದಕ್ಕೂ ಅವರಿಗೆ ಮಾರ್ಗದರ್ಶನ ನೀಡುತ್ತದೆ.
ನಮ್ಮ ಪ್ರತಿಭಾವಂತ ಯುವ ಜನತೆಗೆ 2047ರ ದೇಶದ ಸ್ವಾತಂತ್ರದ ಶತಮಾನೋತ್ಸವದವರೆಗೆ ಭವ್ಯವಾದ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ವಿಶೇಷ ಅವಕಾಶವಿದೆ. ನಮ್ಮ ಯುವಜನರು ಮುಂದಿನ 25 ವರ್ಷಗಳಲ್ಲಿ ರಾಷ್ಟ್ರದ ಪ್ರಗತಿ ಯೊಂದಿಗೆ ತಮ್ಮ ಗುರಿಗಳನ್ನು ಜೋಡಿಸುವ ಮೂಲಕ ದೇಶ ಮತ್ತು ಸಮಾಜಕ್ಕಾಗಿ ತುಂಬು ಹೃದಯದಿಂದ ಕೆಲಸ ಮಾಡುತ್ತಾರೆ ಎಂಬ ನಂಬಿಕೆಯಿದೆ.
ನಿಮ್ಮ ಆಲೋಚನೆಗಳನ್ನು ಹಂಚಿ ಕೊಂಡಿದ್ದಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು. ನಿಮ್ಮ ಉತ್ತಮ ಆರೋಗ್ಯ ಮತ್ತು ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಕೆಗಳು.
ನಿಮ್ಮ,
ನರೇಂದ್ರ ಮೋದಿ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















