ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ವಿವಿಧ ನೆಪ ಹೇಳಿ ಆಸ್ತಿ ತೆರಿಗೆ ಪಾವತಿಸದೇ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವ ಬರೋಬ್ಬರಿ ಆರು ಲಕ್ಷ ಜನರಿಗೆ ಮೊಬೈಲ್ ನೋಟೀಸ್ ಜಾರಿ ಮಾಡಲು ಮುಂದಾಗುವ ಮೂಲಕ ಬಿಬಿಎಂಪಿ BBMP ಬಿಗ್ ಶಾಕ್ ನೀಡಿದೆ.
ತನ್ನ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಸೂಲಿ ಮಾಡಲಿ ಬಿಬಿಎಂಪಿ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಆದರೆ, ಬಾಡಿಗೆದಾರರ ಹೆಸರು ಹೇಳಿ ಮನೆ ಮಾಲೀಕರು ಆಸ್ತಿ ತೆರಿಗೆ ಕಟ್ಟದೇ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇದೇ ರೀತಿ ಆಸ್ತಿ ತೆರಿಗೆ ಪಾವತಿಸದ ಬರೋಬ್ಬರಿ ಆರು ಲಕ್ಷ ಜನರಿಗೆ ಎರಡನೆಯ ಹಂತದಲ್ಲಿ ಮೊಬೈಲ್ ನೋಟೀಸ್ ಜಾರಿ ಮಾಡಲು ಬಿಬಿಎಂಪಿ ಸಿದ್ದತೆ ಮಾಡಿಕೊಂಡಿದೆ.
ಹೇಗೆ ಕಳುಹಿಸಲಿದೆ ನೋಟೀಸ್?
ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರಿಗೆ ಮೊಬೈಲ್ ಸಂದೇಶ ಕಳುಹಿಸಲಾಗುತ್ತಿದೆ. ವಾಟ್ಸಪ್ ಮೂಲಕ ನೋಟೀಸ್ ಜಾರಿ ಮಾಡಿ ತೆರಿಗೆ ಪಾವತಿ ಮಾಡುವಂತೆ ಸೂಚನೆ ನೀಡಲಾಗುತ್ತದೆ.
ಆರಂಭದಲ್ಲಿ ಬರೋಬ್ಬರಿ 3.5 ಲಕ್ಷ ಜನರಿಗೆ ಮೊಬೈಲ್ ನೋಟಿಸ್ ಜಾರಿ ಮಾಡಲಾಗಿದ್ದು, ಈಗ ಮತ್ತೆ 6 ಲಕ್ಷ ಜನರಿಗೆ ಮೊಬೈಲ್ ನೋಟಿಸ್ ಕಳಿಸಲು ಬಿಬಿಎಂಪಿ ಮುಂದಾಗಿದೆ.
Also read: ಆಟೋ-ಕಂಟೈನರ್ ಲಾರಿ ನಡುವೆ ಭೀಕರ ಅಪಘಾತ: 10 ವಿದ್ಯಾರ್ಥಿಗಳಿಗೆ ಗಾಯ
ಮೊಬೈಲ್ ಮೂಲಕ ಮಾತ್ರವಲ್ಲದೇ ಮನೆ ಮನೆಗೂ ತೆರಳಿ ನೋಟೀಸ್ ನೀಡಲಾಗುತ್ತದೆ. ಈಗಾಗಲೇ ಬಿಬಿಎಂಪಿ ಎಂಟು ವಲಯದ ಜನರಿಗೂ ನೋಟಿಸ್ ಜಾರಿ ಮಾಡುತ್ತಿದೆ.
ಬಾಕಿ ಉಳಿಸಿಕೊಂಡಿರುವ ಆಸ್ತಿ ಮಾಲೀಕರು ತತಕ್ಷಣವೇ ಪಾವತಿ ಮಾಡಬೇಕು. ಇಲ್ಲದೇ ಹೋದಲ್ಲಿ ಕಾನೂನು ರೀತಿ ಕ್ರಮಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post