ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕನ್ನಡ ರಾಜ್ಯೋತ್ಸವವು ಬರಿ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು ಪ್ರತಿದಿನವೂ ಕನ್ನಡ ನೆಲ ಜಲದ ಬಗ್ಯೆ ನಾವೆಲ್ಲರೂ ಒಗ್ಗಟ್ಟಿನಿಂದ ಹೊರಡೋಣ ನಾವೆಲ್ಲ ಕನ್ನಡಿಗರು ಹೃದಯವಂತರು ಎಂದು ಕನ್ನಡದ ಬಗ್ಗೆ ಹೆಚ್ಚು ಮಾತನಾಡೋಣ ಎಂದು ಎಸ್ ಎಸ್ ಕಲಾ ಸಂಗಮ ಸಂಸ್ಥೆ ಸಂಸ್ಥಾಪಕ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಎಸ್ ಎಸ್ ಕಲಾ ಸಂಗಮ ಸಂಸ್ಥೆಯಿಂದ ಅದ್ದೂರಿ ಕನ್ನಡ ರಾಜ್ಯೋತ್ಸವದ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮುಖಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಚಿಕ್ಕಪೇಟೆ ಕ್ಷೇತ್ರದ ಶಾಸಕ ಆರ್. ವಿ. ದೇವರಾಜ್ ಅವರ ಪತ್ನಿ ಡಾ. ಆರ್. ವಿ. ಮಮತಾ ದೇವರಾಜ್ ಮಾತನಾಡಿ, ನಾವು ಕನ್ನಡಿಗರು ಕನ್ನಡ ನೆಲದಲ್ಲಿ ಹುಟ್ಟಿರುವುದೇ ನಾವು ನಮ್ಮ ಭಾಗ್ಯ. ವಿಶಾಲ ಹೃದಯದವಂತರು, ಮಣ್ಣಲ್ಲಿ ಮಣ್ಣಾಗಿ ಹೋಗುವ ಈ ನಾಡಿನ ಮಣ್ಣಿಗೆ ಗೌರವ ಕೊಡಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಜೂನಿಯರ್ ವಿಷ್ಣುವರ್ಧನ್, ಅಂಬರೀಶ್ ಇವರ ವಿಶೇಷ ಅಭಿನಯದ ಮುಖಾಂತರ ಪ್ರೇಕ್ಷಕರಿಂದ ಸಿಳ್ಳೆ ಚಪ್ಪಾಳೆಗಳ ಮುಕಾಂತರ ಕಲಾವಿದರನ್ನು ಪ್ರೋತ್ಸಾಹಿಸಿದರು. ಅನೇಕ ನೃತ್ಯ ತಂಡದಿಂದ ವಿಶೇಷ ಹಾಡುಗಳಿಗೆ ಹೆಜ್ಜೆ ಹಾಕಿದರು. ನವಿಲು ಫಿಲಂ ಅಕಾಡೆಮಿ ತಂಡದಿಂದ ಹಾಗೂ ಶ್ರೀ ನಾಟ್ಯ ಕಲಾ ಅಕಾಡೆಮಿ ಮತ್ತು ಶಿವ ಭೈರವ ನಟರಾಜ ತಂಡದಿಂದ ಹಾಗೂ ಭರತನಾಟ್ಯ ಜನರ ಮನಸರಗೊಂಡಿತು. ಈ ಸಂದರ್ಭದಲ್ಲಿ ಪಾರ್ಟ್ನರ್ ಚಲನಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು 2023-24ರ ಅದ್ದೂರಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಅದ್ದೂರಿ ಕಾರ್ಯಕ್ರಮದ ರಾಯಭಾರಿಯಾಗಿ ಖ್ಯಾತ ಮಾಡೆಲ್ ಡಾ. ವಿಜಯಲಕ್ಷ್ಮಿಯವರನ್ನು ಆಯ್ಕೆ ಮಾಡಲಾಯಿತು,
ಈ ಕಾರ್ಯಕ್ರಮದ ಘನ ಉಪಸ್ಥಿತಿ ವಹಿಸಿದ ಅನಿತಾ ಥಾಮಸ್, ಡಾ. ವಿಜಯಲಕ್ಷ್ಮಿ, ರಾಧಿಕಾ ಆಚಾರಿ, ಹಂಸ ಹಾಗೂ ಚಲನಚಿತ್ರ ನಟಿ ಅನು ಹಾಸನ್, ಸಮಾಜ ಸೇವಕರು ಬಿ ಎಸ್ ಎನ್ ಲ್ ಶ್ರೀಧರ್ ಹಾಗೂ ಎಸ್. ಎಸ್. ಕಲಾ ಸಂಗಮ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಿ.ಕೆ. ಶಿವಕುಮಾರ, ಮೌರ್ಯ ಪೂಜಾರಿಯವರು ಅಚ್ಚುಕಟ್ಟಾಗಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಇನ್ನೂ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post