ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ Bidar MLA Shylendra Beldale ಅವರ ಶಾಸಕರ ಜನ ಸಂಪರ್ಕ ಕಚೇರಿಯನ್ನು ಬೆಂಗಳೂರಿನ ಶಾಸಕರ ಭವನದ 3ನೇ ಕಟ್ಟಡದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ BYVijayendra ಅವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಕ್ಷೇತ್ರದ ಜನರ ಒಳಿತಿಗಾಗಿ ಹಗಲಿರುಳು ಶ್ರಮಿಸುವ ಮೂಲಕ ಇನ್ನೂ ಹೆಚ್ಚಿನ ಜನಪ್ರೀಯತೆ ಗಳಿಸಿ ಎಂದು ಶುಭ ಹಾರೈಸಿದರು.

Also read: ಬಿಗ್ ಸರ್ಪೈಸ್ | ಬೆಂಗಳೂರಿನಲ್ಲಿ ತೇಜಸ್ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿದ ಪ್ರಧಾನಿ ಮೋದಿ
ಶಾಸಕರ ಭವನದಲ್ಲಿರುವ ಮೂರನೇ ಕಟ್ಟಡದಲ್ಲಿನ ಶಾಸಕರ ಜನ ಸಂಪರ್ಕ ಕಚೇರಿ ಸಂಖ್ಯೆ 279, ಜನ ಸ್ಪಂದನ ಕಚೇರಿ ಸಂಖ್ಯೆ 278 ಹೊಂದಿರುತ್ತದೆ. ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಇನ್ನು ಮುಂದೆ ಇದೇ ಜನಸಂಪರ್ಕ ಕಚೇರಿಯಲ್ಲಿ ಮತ್ತು ನಮ್ಮ ಕಚೇರಿ ಸಿಬ್ಬಂದಿಗಳು ಜನ ಸ್ಪಂದನ ಕಚೇರಿಯಲ್ಲಿ ಲಭ್ಯವಿರುತ್ತಾರೆ. ನನ್ನ ಕ್ಷೇತ್ರದ ಪ್ರೀತಿಯ ಜನರು ಬಂದು ಬೆಂಗಳೂರಿನಲ್ಲಿರುವ ಕೆಲಸಗಳ ತಮ್ಮ ಅಹವಾಲುಗಳನ್ನು ಸಲ್ಲಿಸಬಹುದು. ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸುವೆ ಮತ್ತು ಜನರ ಕಷ್ಟಗಳಿಗೆ ಸ್ಪಂದಿಸಿ, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಾಗೂ ಸರ್ಕಾರದ ಸೌಕರ್ಯಗಳನ್ನು ಜನರ ಬಾಗಿಲಿಗೆ ತಲುಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಜನರಲ್ಲಿ ಮನವಿ ಮಾಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post