ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೇಡಿಯೋ ಶಿವಮೊಗ್ಗ Radio Shivamogga ಹಾಗೂ ಪರಿಸರ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಕನ್ನಡ ರಸಪ್ರಶ್ನೆ #KannadaQuiz 2023ರ ಅಂತಿಮ ಸುತ್ತು ಬಾನುಲಿ ಕೇಂದ್ರದ ನೇರಪ್ರಸಾರದಲ್ಲಿ ಯಶಸ್ವಿಯಾಗಿ ಜರುಗಿತು.
ಸಾರ್ವಜನಿಕರ ವಿಭಾಗ ಹಾಗೂ ವಿದ್ಯಾರ್ಥಿ ವಿಭಾಗದಲ್ಲಿ ಪ್ರತ್ಯೇಕವಾಗಿ ಸುತ್ತು ನಡೆಯಿತು. ರಸಪ್ರಶ್ನೆಯನ್ನು #Quiz ಚೇತನ್ ಸಿ ರಾಯನಹಳ್ಳಿ ನಡೆಸಿಕೊಟ್ಟರು. ಇವರೊಂದಿಗೆ ನಿಲಯದ ಸಂಯೋಜಕ ಗುರುಪ್ರಸಾದ್, ಕಾರ್ಯಕ್ರಮ ಸಂಯೋಜಕ ಕೆ.ವಿ. ಅಜೇಯ ಸಿಂಹ, ತಾಂತ್ರಿಕ ಸಂಯೋಜಕ ಶ್ರೀಕಾಂತ್, ಕ್ಷೇತ್ರ ಸಂಯೋಜಕ ದಿನೇಶ್ ಹೊಸನಗರ, ಆರ್’ಜೆಗಳಾದ ಶ್ರೀಧರ್, ಮಹಾಲಕ್ಷ್ಮಿ, ಅಶ್ವಿನಿ, ಅರ್ಪಿತಾ, ರಕ್ಷಿತಾ ಹೊಳ್ಳ, ಶ್ವೇತಾ, ಪವಿತ್ರಾ ದಿನೇಶ್ ಸಹಕರಿಸಿದರು. ಪುಟಾಣಿಗಳಾದ ತನುಷ್ ನಾಚಪ್ಪ, ಇಶಾನ್ ಇದ್ದರು.

ಸಾರ್ವಜನಿಕರ ವಿಭಾಗ: ಪ್ರಥಮ ಬಹುಮಾನ – ಯಶೋದಾ ಶೇಖರ್ ಹಾಗೂ ಬಿ.ಜಿ. ಗೀತಾ (ಅಂಬರೀಶ್ ತಂಡ), ದ್ವಿತೀಯ ಬಹುಮಾನ- ಬಿ.ವಿ. ನಂದಿನಿ ಹಾಗೂ ಎಚ್. ಕಿರಣ್ ಕುಮಾರ್(ರಾಜಕುಮಾರ್ ತಂಡ), ತೃತೀಯ ಬಹುಮಾನ ಶೈಲಜಾ ಹಾಗೂ ಭಾರತಿ ಎನ್. ರಾವ್ (ವಿಷ್ಣುವರ್ಧನ್ ತಂಡ)
Also read: ಚಾಮುಂಡೇಶ್ವರಿಗೆ 5 ವರ್ಷಗಳ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ವಿದ್ಯಾರ್ಥಿ ವಿಭಾಗ: ಪ್ರಥಮ ಬಹುಮಾನ – ಎನ್. ನಿಸರ್ಗ ಹಾಗೂ ಬಿ.ವೈ. ಅಕ್ಷತಾ, ಕಸ್ತೂರ ಬಾ ಪಿಯು ಕಾಲೇಜು (ಗಂಗರು ತಂಡ), ದ್ವಿತೀಯ ಬಹುಮಾನ ಚಿಂತನ್ ಎ. ಕಲ್ಲಜ್ಜಿ ಹಾಗೂ ರಜತ್ ಕೃಷ್ಣ ಆರ್ ಹತ್ವಾರ್ – ಸಾಂದೀಪನಿ ಶಾಲೆ (ಹೊಯ್ಸಳ ತಂಡ), ತೃತೀಯ ಬಹುಮಾನ – ಶರಣ್ಯಾ ಶರ್ಮ ಹಾಗೂ ಎಸ್.ಎಸ್. ಸುಮೇಧಾ ರಾವ್ – ಮಹಾವೀರ ಶಾಲೆ (ವಿಜಯ ನಗರ ತಂಡ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post