ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಾನವೀಯತೆಯ ಪಾಠ ಮಾಡಿದರೆ ಸಾಲದು, ಅದನ್ನು ಪಾಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಶಾಸಕ, ಹಿರಿಯ ನಾಯಕ ಬಸವನಗೌಡ ಪಾಟೀಳ್ ಯತ್ನಾಳ್ Basavanagowda Patil Yatnal ಟಾಂಗ್ ನೀಡಿದ್ದಾರೆ.
ಮುಖ್ಯಮಂತ್ರಿಗಳ ಜನತಾದರ್ಶನಕ್ಕೆ ಆಗಮಿಸಿದ್ದ ಹಿರಿಯ ನಾಗರಿಕರನ್ನು ನಿಲ್ಲಿಸಿಕೊಂಡೇ ಮಾತನಾಡಿದ್ದ ಸಿದ್ದರಾಮಯ್ಯ ಅವರ ಮನಃಸ್ಥಿತಿಯನ್ನು ವಿರೋಧಿಸಿ ಅವರು ಎಕ್ಸ್(ಟ್ವೀಟ್) ಮಾಡಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಲ್ಲಿ CM Siddaramaiah ವಿನಂತಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಮಹಾಪ್ರಭುಗಳು, ನಿಮ್ಮ ಜನತಾ ದರ್ಶನಗಳಲ್ಲಿ ವಯಸ್ಸಾದ ಹಿರಿಯರನ್ನು ಕನಿಷ್ಠ ಕುಳಿತುಕೊಳ್ಳಲು ಹಾಗು ಅವರ ಅಹವಾಲನ್ನು ಕೇಳುವ ವ್ಯವಸ್ಥೆಯನ್ನು ಮಾಡಬೇಕು ಎಂದಿದ್ದಾರೆ.
Also read: ಕುವೆಂಪು ವಿವಿ: ಸ್ನಾತಕೋತ್ತರ ಪದವಿಯ ಮೆರಿಟ್ ಸೀಟುಗಳು ಭರ್ತಿ
ಹೀಗೆ ಅವರನ್ನು ನಿಲ್ಲಿಸಿ, ಅವರು ಗೋಗರೆಯುವುದನ್ನು ನೋಡಿದರೆ ಪ್ರಜಾಪ್ರಭುತ್ವದ ಆಶಯಗಳಿಗೆ ಧಕ್ಕೆಯಾಗಿರುವಂತೆ ಭಾಸವಾಗುತ್ತದೆ. ಮಾನವೀಯತೆಯ ಪಾಠ ಮಾಡಿದರೆ ಸಾಲದು, ಪಾಲಿಸಬೇಕು ಎಂದು ಕಟಕಿಯಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post