ಮಹಿಳೆಯರು ಸಾಮಾಜಿಕ ಒತ್ತಡಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕಿದೆ ಎಂದು ಕಸ್ತೂರಬಾ ಶಾಲೆಯ ಹಿರಿಯ ವಿದ್ಯಾರ್ಥಿನಿ ಹಾಗೂ ಮೈಸೂರು ತಾಲ್ಲೂಕಿನ ತಹಶೀಲ್ದಾರರಾದ ಡಾ. ನೂರುಲ್ ಹೂದಾ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಸ್ತೂರಬಾ ಬಾಲಿಕಾ ಪ್ರೌಢಶಾಲೆಯ ವತಿಯಿಂದ ಶನಿವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿನಿ ಸಂಘದ ಸಮಾರೋಪ ಸಮಾರಂಭ ಹಾಗೂ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಬದುಕಿನ ನಿಜವಾದ ಸವಾಲುಗಳು ತಿಳಿಯುವುದೇ ವಿದ್ಯಾರ್ಥಿ ಜೀವನದ ನಂತರ. ಅದರೇ ಸವಾಲುಗಳನ್ನು ಎದುರಿಸುವ ಮನೋಸ್ಥೈರ್ಯ ನೀಡುವುದು ಪ್ರೌಢಶಾಲೆಯ ವಿದ್ಯಾಭ್ಯಾಸದ ಹಂತದಲ್ಲಿ ನಾವು ಕಲಿತ ಕೌಶಲ್ಯತೆ ಮತ್ತು ಮೌಲ್ಯಗಳಿಂದ. ನಮಗೆ ಕಲಿಸಿದ ಗುರು, ವಿದ್ಯಾಸಂಸ್ಥೆ, ಪೋಷಕರ ಕೊಡುಗೆಗಳನ್ನು ಎಂದಿಗೂ ಮರೆಯಬಾರದು.
Also read: ಕಾಂತಾರ-2 ಚಿತ್ರಕ್ಕಾಗಿ ಇತಿಹಾಸ ಹಿನ್ನೆಲೆಯ ಆಯುಧ ನೀಡಲು ಮುಂದಾದ ಕೇರಳ ರಾಜಮನೆತನ
ಕನಸುಗಳಿರುವ ದಾರಿಯಲ್ಲಿ ಸಾಗಿ. ಗುರಿಗಳಿಂದ ದಾರಿ ತಪ್ಪಲು ಅನೇಕ ಆಕರ್ಷಣೀಯ ವಿಚಾರಗಳಿವೆ. ಸಾಮಾಜಿಕ ಜಾಲತಾಣಗಳು ವೇಗವಾಗಿ ತನ್ನೆಡೆಗೆ ಆಕರ್ಷಿಸಿಕೊಂಡು ಬಿಡುತ್ತದೆ. ಅಂತಹ ಬದುಕಿನ ಯಶಸ್ಸಿನ ದಾರಿ ತಪ್ಪಿಸುವ ಆಕರ್ಷಣೆಗಳಿಂದ ದೂರವಿರಿ ಎಂದು ಸಲಹೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಸಹ ಕಾರ್ಯದರ್ಶಿಗಳಾದ ಡಾ.ಪಿ.ನಾರಾಯಣ್ ಸಮಾರೋಪ ಮಾತುಗಳನ್ನಾಡಿದರು. ಉಪಪ್ರಾಂಶುಪಾಲರಾದ ಕೆ.ಆರ್.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಸಂಘದ ಪ್ರಧಾನಿ ಇಂಚರಾ.ಕೆ.ವಿ, ವಿರೋಧ ಪಕ್ಷದ ನಾಯಕಿ ವೇದಿಕಾ ರಾಯ್ಕರ್ ಉಪಸ್ಥಿತರಿದ್ದರು. ಇದೇ ವೇಳೆ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post