ಕಲ್ಪ ಮೀಡಿಯಾ ಹೌಸ್ | ಇಸ್ಲಾಮಾಬಾದ್ |
ಭಾರತ ದೇಶವನ್ನು ಅತಿಕ್ರಮಿಸಿ, ವಶಪಡಿಸಿಕೊಂಡು, ಪ್ರಧಾನಿ ನರೇಂದ್ರ ಮೋದಿಯವರನ್ನು PMNarendraModi ಬಂಧಿಸುತ್ತೇವೆ ಎಂದು ಪಾಕಿಸ್ಥಾನದ ಹಿರಿಯ ಸೇನಾಧಿಕಾರಿ ನೀಡಿರುವ ಹೇಳಿಕೆ ವೈರಲ್ ಆಗಿದೆ.
#BREAKING In this video now viral on social media, a senior #PakistanArmy officer is seen talking to a crowd about invading and occupying #India and imprisoning #Modi. And then liberating Palëst¡ne followed by the return of the mythical Imam Mehdi. What grandeur delusions! pic.twitter.com/g9PunTnoST
— Taha Siddiqui (@TahaSSiddiqui) December 5, 2023
ತನ್ನೊಂದಿಗಿದ್ದ ಗುಂಪಿನೊಂದಿಗೆ ಮಾತನಾಡಿದ ಅಲ್ಲಿನ ಹಿರಿಯ ಸೇನಾಧಿಕಾರಿಯೊಬ್ಬ, ಭಾರತವನ್ನು ವಶಪಡಿಸಿಕೊಂಡು, ಇಸ್ಲಾಮಿಕ್ ರಾಷ್ಟçವನ್ನಾಗಿ ಮಾಡುತ್ತೇವೆ. ಅಲ್ಲದೇ, ಭಾರತದ ಪ್ರಧಾನಿ ನರೇಂದ್ರ ಮೋದಿಯನ್ನು ಬಂಧಿಸುತ್ತೇವೆ. ಇದು ನಮ್ಮ ಇಚ್ಚೆಯಾಗಿದೆ ಎಂದಿದ್ದಾನೆ.
Also read: ಸಂಸತ್ ಭವನಕ್ಕೆ ನುಗ್ಗಿದ ಇಬ್ಬರು ಅಪರಿಚಿತರು | ಲೋಕಸಭೆಯಲ್ಲಿ ಟಿಯರ್ ಗ್ಯಾಸ್ ದಾಳಿ
ಅಷ್ಟೇ ಅಲ್ಲ, ಭಾರತವನ್ನು ಆಕ್ರಮಿಸಿದ ನಂತರ ಪ್ಯಾಲೆಸ್ತೀನ್’ನನ್ನು ವಿಮೋಚನೆಗೊಳಿಸುವುದಾಗಿ ಪಾಕಿಸ್ಥಾನಿ ಸೇನೆಯ ಹಿರಿಯ ಅಧಿಕಾರಿ ಹೇಳಿದ್ದು ವಿಚಿತ್ರವೆಂದರೆ ಅಲ್ಲಿ ನಿಂತಿದ್ದ ಜನರು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ.
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗುವ ಜೊತೆಯಲ್ಲೇ, ಪಾಕಿಸ್ಥಾನ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಅಪಹಾಸ್ಯಕ್ಕೆ ಕಾರಣವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post