ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಡೂ ಮೈಂಡ್ಸ್ ಫೌಂಡೇಶನ್, ಪರಿಸರ ಅಧ್ಯಯನ ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಇವುಗಳ ಸಂಯುಕ್ತಾಶ್ರಯದಲ್ಲಿ ಡಿ.15 ರಂದು ಇ-ತ್ಯಾಜ್ಯ ವಿಲೇವಾರಿ ಮತ್ತು ಸಂಸ್ಕರಣೆ E-Waste disposal and processing ಬಗ್ಗೆ ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿದೆ.
ನಗರದ ಜೆ ಏನ್ ಏನ್ ಇಂಜಿನಿಯರಿಂಗ್ ಕಾಲೇಜು, JNN Engineering College ಅಡ್ಮಿನ್ ಬ್ಲಾಕ್ ಸೆಮಿನಾರ್ ಹಾಲ್ ನಲ್ಲಿ ಬೆಳಿಗ್ಗೆ 11ಕ್ಕೆ ನಡೆಯಲಿರುವ ವಿಚಾರಗೋಷ್ಠಿಯನ್ನು ನ್ಯಾಯಮೂರ್ತಿ ಸುಭಾಷ್ ಅಡಿ ಅವರು ಉದ್ಘಾಟಿಸುವರು.
ಕಾರ್ಯಕ್ರಮದಲ್ಲಿ ಪರಿಸರ ಅಧ್ಯಯನ ಕೇಂದ್ರ ನಿರ್ದೇಶಕ ಜನಾರ್ಧನ ಪ್ರಾಸ್ತಾವಿಕ ಮಾತನಾಡುವರು, ಜೆಎನ್‌ಎನ್‌ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮಂಜುನಾಥ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಐಐಡಬ್ಲ್ಯೂಎಂ ಕಾರ್ಯನಿರ್ವಾಹಕ ನಿರ್ದೇಶಕರು ಪಿ. ಬಿನೀಶಾ, ವಿಶೇಷ ಆಹ್ವಾನಿತರಾಗಿ ಮಹಾನಗರಪಾಲಿಕೆಯ ಆಯುಕ್ತರಾದ ಮಾಯಣ್ಣಗೌಡ, ದಾವಣಗೆರೆ ಹಿರಿಯ ಪರಿಸರ ಅಧಿಕಾರಿ ರಮೇಶ್ ಡಿ ನಾಯ್ಕ್, ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಗೋಪಿನಾಥ್, ಡೂ ಮೈಂಡ್ಸ್ ಫೌಂಡೇಶನ್ ಮ್ಯಾನೇಜಿಂಗ್ ಟ್ರಸ್ಟಿಗಳಾದ ವೆಂಕಟೇಶ್, ಎಚ್.ಎಸ್. ನವೀನ ಭಾಗವಹಿಸುವರು.
Also read: ಸಮಾಜಮುಖಿ ಸಕಾರಾತ್ಮಕ ಆಲೊಚನೆಗಳತ್ತ ಯುವ ಸಮೂಹ ಚಿತ್ತ ಹರಿಸಿ: ಎಎಸ್‌ಪಿ ಅನಿಲ್ ಕುಮಾರ್ ಭೂಮರೆಡ್ಡಿ ಕಿವಿಮಾತು
ನಂತರ ನ್ಯಾಯಮೂರ್ತಿ ಸುಭಾಷ್ ಅಡಿ ಮತ್ತು ಬಿನೀಶಾ ಅವರು ತ್ಯಾಜ್ಯ ನಿರ್ವಹಣೆಯ ಅವಶ್ಯಕತೆಗಳು, ಉದ್ಯಮಶೀಲತೆಯ ಅವಕಾಶಗಳ ಕುರಿತು ವಿಚಾರ ಗೋಷ್ಠಿಯನ್ನು ನಡೆಸಿಕೊಡಲಿದ್ದಾರೆ.
ಜಾಗತಿಕವಾಗಿ, ಪ್ರತಿ ವರ್ಷ ಸುಮಾರು 57ಮಿಲಿಯನ್ ಮೆಟ್ರಿಕ್ ಟನ್ ಇ-ತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಪ್ರತಿ ವ್ಯಕ್ತಿಯಿಂದ ಸುಮಾರು 6.8KGಗಳಿಗೂ ಹೆಚ್ಚಿನ ಸರಾಸರಿ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿದೆ. ಭಾರತದಲ್ಲಿ ಕೂಡ ವರ್ಷಾವಧಿ 1.5 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಇ-ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಗುಜರಾತ್ ರಾಜ್ಯವು ತಕ್ಕಮಟ್ಟಿಗೆ ಇ-ತ್ಯಾಜ್ಯ ವನ್ನು ಸಂಸ್ಕರಿಸುವಲ್ಲಿ ಮುಂಚೂಣಿಯಲ್ಲಿದ್ದು ಕರ್ನಾಟಕ, ಉತ್ತರಾಖಂಡ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ನಂತರದ ಸ್ಥಾನದಲ್ಲಿವೆ. ಒಂದು ಅಂದಾಜಿನಂತೆ 2030ರ ವೇಳೆಗೆ ಜಾಗತಿಕವಾಗಿ ಇ-ತ್ಯಾಜ್ಯದ ಪ್ರಮಾಣ 75 ಮೆಟ್ರಿಕ್ ಟನ್ ಆಗಲಿದ್ದು ಪ್ರತಿ ವ್ಯಕ್ತಿಯ ಸರಾಸರಿ ಸುಮಾರು 10ಕೆಜಿ ತಲುಪಲಿದೆ.
ಮುಂದಿನ ದಿನಗಳಲ್ಲಿ ಈ ಸಮಸ್ಯೆ ಬೃಹತ್ತಾಗಿ ಬೆಳೆಯಲಿದ್ದು ಇದನ್ನು ಈಗಿನಿಂದಲೇ ನಿಯಂತ್ರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಇ-ತ್ಯಾಜ್ಯ ನಿರ್ವಹಣೆ ಮತ್ತು ಪರಿಸರದ ಮೇಲೆ ಅದರ ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಅಂತಾರಾಷ್ಟ್ರೀಯ ಇ-ತ್ಯಾಜ್ಯ ದಿನದಂದು “Recycle it all, no matter how small”ಎಂಬ ಘೋಷವಾಕ್ಯದೊಂದಿಗೆ ಕಾರ್ಯಕ್ರಮ ರೂಪಿಸಿದೆ.
ಕಾರ್ಯಕ್ರಮವು ಮಹಾ ನಗರಪಾಲಿಕೆ, ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಫೆವೊರ್ಡ್-ಕೆ, ಫೆವೋಸ್ ಶಿವಮೊಗ್ಗ, ಇ-ಹಸಿರು, ತ್ಯಾಜ್ಯ ಸಂಸ್ಕರಣಾ ಘಟಕ, ಬೆಂಗಳೂರು, ಸಿಗ್ನಿಯ ಕಂಪ್ಯೂಟೆಕ್, ಬೆಂಗಳೂರು, ರೇಡಿಯೋ ಶಿವಮೊಗ್ಗ FM90.8 ಇವರ ಸಹಯೋಗದಲ್ಲಿ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ಡೂ ಮೈಂಡ್ಸ್ ಫೌಂಡೇಶನ್, ಶಿವಮೊಗ್ಗ ವೆಂಕಟೇಶ್ ಡಿ., 9980233211 ಮತ್ತು ನವೀನ್ ಹೆಚ್.ಎಸ್. 9845989781. ಗುರುಪ್ರಸಾದ್ ಬಿ. (ರೇಡಿಯೋ ಶಿವಮೊಗ್ಗ FM90.8) 9448293483.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post