ಅಲ್ಲಿ ವಿದ್ಯಾರ್ಥಿಗಳೇ ನಿರ್ಮಿಸಿದ್ದ ರೋಬೊಗಳು ರಸ್ತೆಯ ಉಬ್ಬು ತಗ್ಗುಗಳ ಲೆಕ್ಕಿಸದೇ ಮುನ್ನುಗುತ್ತಿತ್ತು. ವಿವಿಧ ಸರ್ಧೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ತಂಡದ ರೋಬೊಗಳ ಪ್ರದರ್ಶನ ನೋಡುಗರನ್ನು ರೋಮಾಂಚನಗೊಳಿಸಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ಎವನ್ ಲಾಜಿಕ್ಸ್ ಕಂಪನಿ ಸ್ಥಾಪಕರಾದ ಪ್ರವೀಣ್ ಉಡುಪ ಮಾತನಾಡಿ, ಪ್ರಯೋಗಾತ್ಮಕ ಕಲಿಕೆಯಿಂದ ಮಾತ್ರ ನಿಜವಾದ ಜ್ಞಾನದ ವಿಕಸನವಾಗಲಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಮ್ಮ ಪಕ್ಕದವರೇ ನಮಗೆ ಸ್ಪರ್ಧಿಗಳಾಗಿರುತ್ತಾರೆ ಎಂಬ ಅರಿವು ಬೇಕಿದೆ ಎಂದು ಹೇಳಿದರು.
Also read: ಕೋವಿಡ್ ನಿಯಂತ್ರಿಸಲು ಈ ನಿಯಮಗಳನ್ನು ಅನುಸರಿಸಿ: ಜಿಲ್ಲಾಧಿಕಾರಿ ಸೆಲ್ವಮಣಿ ಸಲಹೆ
ಕೃತಕ ಬುದ್ಧಿಮತ್ತೆ ಮತ್ತು ರೋಬೊಟಿಕ್ಸ್ ಕ್ಷೇತ್ರ ಅನೇಕ ಉದ್ಯೋಗವಕಾಶಗಳನ್ನು ಹೊಂದಿದೆ. ನಿಮ್ಮ ನಾವೀನ್ಯ ಯೋಜನೆಗಳಿಗೆ ಹೊಸ ತಂತ್ರಜ್ಞಾನಗಳ ಸ್ಪರ್ಶ ನೀಡಿ. ಸಾಧ್ಯವಾದಷ್ಟು ಆರಾಮದಾಯಕ ಮನಸ್ಥಿತಿಗಳಿಂದ ಹೊರಬಂದು ನಿರಂತರ ಕಲಿಕೆಯಲ್ಲಿ ಮುಕ್ತವಾಗಿ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ.ಎಸ್.ಸುರೇಂದ್ರ ಅಧ್ಯಕ್ಷತೆ ವಹಿಸಿದ್ದರು. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಎಸ್.ವಿ.ಸತ್ಯನಾರಾಯಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕರಾದ ಅನಿಲ್ ಕುಮಾರ್.ಜೆ, ಪ್ರದೀಪ್. ಎಸ್.ಸಿ, ಪ್ರಶಾಂತ.ಜಿ.ಎಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post