ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರೌಡಿ ಚಟುವಟಿಕೆಗಳನ್ನು ತೊಡಗಿಸಿಕೊಂಡ ವ್ಯಕ್ತಿಗಳ ಮೇಲೆ ಹೆಚ್ಚಿನ ನಿಗಾ ವಹಿಸಿ, ಅಗತ್ಯ ಬಂದರೆ ಅಂತಹವರನ್ನು ಗಡಿಪಾರು ಮಾಡಿದ ಎಂದು ಜಿಲ್ಲಾ ಪೊಲೀಸರಿಗೆ ಎಡಿಜಿಪಿ(ಕಾನೂನು ಸುವ್ಯವಸ್ಥೆ) ಆರ್. ಹಿತೇಂದ್ರ ಅವರು ಖಡಕ್ ಸೂಚನೆ ನೀಡಿದರು.
ಜಿಲ್ಲಾ ಪೊಲೀಸ್ Police ಕವಾಯತು ಮೈದಾನದಲ್ಲಿ ಸೇವಾ ಪೆರೇಡ್ ವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ತನಿಖೆಯಲ್ಲಿರುವ ಪ್ರಕರಣಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡುವಂತೆ, ರೌಡಿ ಆಸಾಮಿಗಳ ಚಟುವಟಿಕೆಗಳ ಮೇಲೆ ನಿಗಾವಹಿಸಿ, ಚಟುವಟಿಕೆಯುಳ್ಳ ರೌಡಿ ಆಸಾಮಿಗಳ ವಿರುದ್ಧ ಗಡಿಪಾರು, ಗೂಂಡಾ ಕಾಯ್ದೆ ಮತ್ತು ಮುಂಜಾಗ್ರತಾ ಕ್ರಮದ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
Also read: ಶಾಲಾ ಮುಖ್ಯಸ್ಥರೇ ಗಮನಿಸಿ! ಮಕ್ಕಳ ಸುರಕ್ಷತೆಗೆ ಈ ಕ್ರಮಗಳು ಕಡ್ಡಾಯ | ಸರ್ಕಾರದ ಸುತ್ತೋಲೆ
ಸಂಘಟಿತ ಅಪರಾಧಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ, ಮಾದಕದ್ರವ್ಯ ಮಾರಾಟ ಮತ್ತು ಮಾದಕ ದ್ರವ್ಯ ವ್ಯಸನಿಗಳ ವಿರುದ್ಧ ಎನ್’ಡಿಪಿಎಸ್ ಕಾಯ್ದೆಯಡಿಯಲ್ಲಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಅವರು ಪರೇಡ್ ಕಮಾಂಡರ್ ಆಗಿ ನೇತೃತ್ವ ವಹಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಜಿಲ್ಲೆಯ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳಿಗೆ ಪ್ರಶಂಸನಾ ಪತ್ರಗಳನ್ನು ನೀಡಿ ಅಭಿನಂದಿಸಿ, ಪೊಲೀಸ್ ವಾಹನಗಳ ಪರಿವೀಕ್ಷಣೆ ನಡೆಸಿದರು.
ಶಿವಮೊಗ್ಗ ಜಿಲ್ಲಾ ಪೊಲೀಸ್ ಕಚೇರಿಗೆ ಭೇಟಿ ನೀಡಿ ಪರಿವೀಕ್ಷಣೆ ನಡೆಸಿ, ಕಚೇರಿಯ ಸ್ವಚ್ಚತೆ, ಕಟ್ಟಡ ಮತ್ತು ವಾಹನಗಳ ಸ್ಥಿತಿಗತಿ, ಕಡತ ನಿರ್ವಹಣೆ, ಅನುದಾನ ಮತ್ತು ವೆಚ್ಚಗಳು ಮತ್ತು ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು.
ದಾವಣಗೆರೆ ಪೂರ್ವ ವಲಯ ಡಿಐಜಿಪಿ ತ್ಯಾಗರಾಜನ್, ಎಸ್’ಪಿ ಮಿಥುನ್ ಕುಮಾರ್, ಎಎಸ್’ಪಿ-1 ಅನಿಲ್ ಕುಮಾರ್ ಭೂಮರೆಡ್ಡಿ, ಎಎಸ್’ಪಿ-2 ಎ.ಜಿ. ಕಾರಿಯಪ್ಪ, ಡಿವೈಎಸ್’ಪಿಗಳಾದ ಬಿ. ಬಾಲರಾಜ್(ಡಿಎಆರ್), ಎಂ. ಸುರೇಶ್, ಗೋಪಾಲಕೃಷ್ಣ ಟಿ. ನಾಯಕ್, ನಾಗರಾಜ್, ಶಿವಾನಂದ ಮದರಖಂಡಿ, ಆಡಳಿತಾಧಿಕಾರಿ ಸತೀಶ್ ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲಾ ಪೊಲೀಸ್ ನಿರೀಕ್ಷಕರು, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಪೊಲೀಸ್ ಉಪ ನಿರೀಕ್ಷಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post