ಕಲ್ಪ ಮೀಡಿಯಾ ಹೌಸ್ | ಜೈಪುರ |
ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ವೇಳೆ ಅಚಾನಕ್ಕಾಗಿ ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ರಾಜಸ್ಥಾನದ ಜೋದ್ಪುರದಲ್ಲಿ ಘಟನೆ ನಡೆದಿದ್ದು, ಮೃತ ಮಕ್ಕಳನ್ನು ಅನನ್ಯಾ (12) ಮತ್ತು ಯುವರಾಜ್ ಸಿಂಗ್ (14) ಎಂದು ಗುರುತಿಸಲಾಗಿದೆ. ಮಕ್ಕಳು ಆರ್ಮಿ ಚಿಲ್ಡ್ರನ್ ಅಕಾಡೆಮಿಯಲ್ಲಿ 5 ಮತ್ತು 7ನೇ ತರಗತಿಯಲ್ಲಿ ಓದುತ್ತಿದ್ದರು ಎಂದು ವರದಿಯಾಗಿದೆ.

Also read: ಮೂರು ವರ್ಷದಲ್ಲಿ ದೇಶದಿಂದ ನಕ್ಸಲಿಸಂ ನಿರ್ನಾಮ: ಅಮಿತ್ ಶಾ ಖಡಕ್ ಮಾತು
ಆತಂಕದಿಂದ ಓಡುತ್ತಿರುವಾಗ, ಬಲಿಪಶುಗಳು ಸೇರಿದಂತೆ ಮೂವರು ರೈಲ್ವೆ ಟ್ರಾಕ್ ಕಡೆ ಓಡಿದ್ದಾರೆ. ಸ್ವಲ್ಪ ಸಮಯದ ನಂತರ ಅನನ್ಯ ಮತ್ತು ಯುವರಾಜ್ರನ್ನು ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.
ಘಟನೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜೋಧ್ಪುರ ಮುನ್ಸಿಪಲ್ ಕಾರ್ಪೊರೇಷನ್ ತಂಡ ನಾಯಿಗಳನ್ನು ಹಿಡಿದಿದೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post