ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಮಲಾಲನ ಪ್ರತಿಷ್ಠಾಪನೆಯ Ramalalla Prathishtapane ಸಂದರ್ಭವಾಗಿ ಶಿವಮೊಗ್ಗದಲ್ಲಿ ಲಡ್ಡು ಹಂಚುವಾಗ ಮುಸ್ಲಿಂ ಮಹಿಳೆಯೊಬ್ಬಳು ಮಧ್ಯ ಪ್ರವೇಶ ಮಾಡಿ, ಮೋದಿಗೆ ಬೈಯುತ್ತ ಅಲ್ಲಾಹು ಅಕ್ಬರ್ ಎಂದು ಘೋಷಣೆ ಮಾಡಿದ ಘಟನೆಯನ್ನು ಕೂಡಲೇ ತನಿಖೆ ನಡೆಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ K S Eshwarappa ಆಗ್ರಹಿಸಿದರು.
ಅವರು ಇಂದು ಸುದ್ಧಿಗಾರರೊಂದಿಗೆ ಮಾತನಾಡಿ, ಇಡೀ ದೇಶವೇ ಸಂತೋಷದ ಸಮಯದಲ್ಲಿ ಇದೆ. ಹಿಂದುಗಳ ಕನಸು ನೆನಸಾಗಿದೆ. ರಾಮಹುಟ್ಟಿದ್ದ ಜಾಗವನ್ನು ಪುಡಿಪುಡಿ ಮಾಡಿ, ಅಲ್ಲಿ ಬಾಬರ್ ಮಸೀದಿಯನ್ನು ನಿರ್ಮಿಸಲಾಯಿತು. ನೂರಾರು ವರ್ಷಗಳ ಹೋರಾಟದ ಫಲವಾಗಿ ಹಿಂದೂಗಳಿಗೆ ಆದ ಅನ್ಯಾಯ ಇಂದು ಸರಿಪಡಿಸಲಾಗಿದೆ. ರಾಮಲಾಲನ ಪ್ರತಿಷ್ಠಾಪನೆ ಇಂದು ನೆರವೇರುತ್ತಿದೆ. ದೇಶವು ಸೇರಿದಂತೆ ಜಗತ್ತೇ ಸಂಭ್ರಮಿಸುತ್ತಿದೆ. ಇಂತಹ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಈ ಅಹಿತಕರ ಘಟನೆ ನಡೆದಿರುವುದು ಖಂಡನೀಯ ಎಂದರು.

Also read: ಮಂದಿರ ನಿರ್ಮಾಣ ಭಾರತೀಯರ ತಾಳ್ಮೆಯ ಸಂಕೇತವಾಗಿದೆ: ಪ್ರಧಾನಿ ಮೋದಿ ಸಂತಸ
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾ ರಕ್ಷಣಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಅವರು ಅವಳು ಹುಚ್ಚಿ ಎಂದು ಹೇಳುತ್ತಾರೆ. ಆದರೆ ಹುಚ್ಚಿಗೆ ಮೋದಿಗೆ ಬೈಯುವುದು ಗೊತ್ತು, ಅಲ್ಲಾಹು ಅಕ್ಬರ್ ಎಂದು ಕೂಗುವುದು ಗೊತ್ತು. ಅವರ ತಂದೆ ಹೇಳಿದರು ಎಂದು ಅವಳನ್ನು ಹುಚ್ಚಿ ಎಂದು ಪರಿಗಣಿಸುವುದು ಬರುತ್ತಾ, ಈ ಘಟನೆ ಸಂಪೂರ್ಣವಾಗಿ ತನಿಖೆಯಾಗಬೇಕು. ಇದರ ಹಿಂದೆ ಯಾವ ಶಕ್ತಿ ಇದೇ ಎಂದು ಗೊತ್ತಾಗಬೇಕು. ರಾಮನ ಭಕ್ತರಿಗೆ ಇದರಿಂದ ತುಂಬ ನೋವಾಗಿದೆ. ಶಿವಮೊಗ್ಗ ಶಾಂತಿಯುತವಾಗಿತ್ತು. ಈಗ ಕೋಮುಗಲಭೆ ಉಂಟುಮಾಡಲು ಈ ಹುನ್ನಾರ ನಡೆದಿರಬಹುದಾಗಿದೆ. ಆದ್ದರಿಂದ ನಿಷ್ಪಕ್ಷಪಾತ ತನಿಖೆಯಾದರೆ ಮಾತ್ರ ಸತ್ಯ ಹೊರಬರುತ್ತದೆ ಎಂದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post