ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಖ್ಯಾತ ಕೈಗಾರಿಕೋದ್ಯಮಿಗಳು ಹಾಗೂ ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡರ S Rudregowda ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಅಭಿನಂದನಾ ಕಾರ್ಯಕ್ರಮವು ಇದೇ ಜ.27ರಂದು ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆಯಲಿದ್ದು, ಇದರ ಅಂಗವಾಗಿ ಬೆಳಗ್ಗೆ 10.30 ರಿಂದ ಶ್ರಮದಿಂದ ಸಾರ್ಥಕತೆಯೆಡೆಗೆ ಶೀರ್ಷಿಕೆಯಡಿ ವಿವಿಧ ಹಂತದ ವಿಚಾರಗೋಷ್ಟಿಗಳು ನಡೆಯಲಿವೆ.
ರುದ್ರೇಗೌಡರ ವ್ಯಕ್ತಿತ್ವದ ಭಾಗವಾದ ರಾಜಕಾರಣ, ಸಮಾಜಸೇವೆ, ಕೈಗಾರಿಕೆಗಳ ಕುರಿತು ಚರ್ಚೆಗಳನ್ನು ಯುವಕರಿಗಾಗಿ ಹಮ್ಮಿಕೊಳ್ಳಲಾಗಿದೆ. ವಿಶೇಷವಾಗಿ ಮೂವರು ಹೆಸರಾಂತ ಸಂಪನ್ಮೂಲ ವ್ಯಕ್ತಿಗಳು ಯುವಕ-ಯುವತಿಯರೊಂದಿಗೆ ಸಾಕಷ್ಟು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಿದ್ದಾರೆ.
ಮೊದಲ ಹಂತದಲ್ಲಿ ಕಾರ್ಕಳ ಶಾಸಕರಾದ ವಿ.ಸುನಿಲ್ ಕುಮಾರ್ ಅವರು ಮೌಲ್ಯಾಧಾರಿತ ರಾಜಕಾರಣ ಕುರಿತು, ಎರಡನೇ ಹಂತದಲ್ಲಿ ಬೆಂಗಳೂರು ಅದಮ್ಯ ಚೇತನ ಫೌಂಡೇಷನ್‌ನ ತೇಜ್ವಸಿನಿ ಅನಂತಕುಮಾರ್ ಅವರು ಪರಿಸರ ಪ್ರಜ್ಞೆಯೇ ಸಮಾಜ ಸೇವೆ ಕುರಿತು ಹಾಗೂ ಮೂರನೇ ಹಂತದಲ್ಲಿ ಕಿರ್ಲೋಸ್ಕರ್ ಫೆರುಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸ್ವತಂತ್ರ ನಿರ್ದೇಶಕರಾದ ಬಿ.ಎಸ್.ಗೋವಿಂದ್ ಅವರು ಸಾಧನೆಗೊಂದು ಗುರಿ ವಿಷಯ ಕುರಿತು ವಿಚಾರ ಗೋಷ್ಟಿ ನಡೆಸಿಕೊಡಲಿದ್ದಾರೆ. ಈ ಮೂರೂ ವಿಚಾರಗೋಷ್ಟಿಗಳ ಅಧ್ಯಕ್ಷತೆಯನ್ನು ಬೆಂಗಳೂರು ರಮಣಶ್ರೀ ಫೌಂಡೇಷನ್‌ನ ಅಧ್ಯಕ್ಷರಾದ ನಾಡೋಜ ಎಸ್. ಷಡಕ್ಷರಿ ಅವರು ವಹಿಸಲಿದ್ದಾರೆ.
Also read: ಹೊಳೆನರಸೀಪುರ: ರಾಷ್ಟ್ರಮಟ್ಟದ ಸಂಸ್ಕೃತ ಭಾಷಣ ಸ್ಪರ್ಧೆಗೆ ವಂಶರಾಮ ಭಟ್ ಆಯ್ಕೆ
ಈ ವಿಚಾರ ಗೋಷ್ಟಿಗಳಲ್ಲಿ ಭಾಗವಹಿಸಲು ಆಸಕ್ತರು ಮೊದಲೇ ನೋಂದಣಿ ಮಾಡಿಕೊಳ್ಳಬೇಕಾಗಿರುತ್ತದೆ, ಈ ಪತ್ರದೊಂದಿಗೆ ನೀಡಿರುವ QR Code ಬಳಸಿ ನೋಂದಣಿ ಮಾಡಿಕೊಳ್ಳಬಹುದು. ನಂತರ ಜನರೇಟ್ ಆದ QR Code ಅನ್ನು ಡೌನ್ಲೋಡ್ ಮಾಡಿಕೊಂಡು ಜ.27 ರಂದು ಬೆಳಗ್ಗೆ 10 ಗಂಟೆಗೆ ತಮ್ಮ ಹಾಜರಿ ನೋಂದಣಿ ಮಾಡಿಸಲು ಆ QR Code ಅನ್ನುಬಳಸಬೇಕು. ಅದರ ಸ್ಕ್ಯಾನ್ ಆದ ಬಳಿಕ ನೋಂದಣಿ ಅಂತಿಮಗೊಂಡು ಕಾರ್ಯಕ್ರಮ ಮುಗಿಯುತ್ತಿದ್ದಂತೆ ಇ- ಸರ್ಟಿಫಿಕೇಟ್ ಅನ್ನು ನೀಡಲಾಗುತ್ತದೆ.
ಈ ವಿಚಾರಗೋಷ್ಟಿಗಳು ಯುವ ಜನಾಂಗದ ಭವಿಷ್ಯಕ್ಕೆ ಮಾರ್ಗದರ್ಶಿಯಾಗಿರುವಂತೆ ರೂಪಿಸಲಾಗಿದೆ. ಯುವ ಸಮೂಹದಲ್ಲಿ ಹೊಸ ಬದಲಾವಣೆ ತರುವ, ಪರಿಸರಾಸಕ್ತರು, ಹೊಸದಾಗಿ ಯಾವುದೇ ಉದ್ಯಮವನ್ನು ಆರಂಭಿಸಬೇಕು ಎಂಬ ಚಿಂತನೆ ಹೊಂದಿದವರು, ಈಗಾಗಲೇ ಸಣ್ಣ ಉದ್ಯಮಗಳನ್ನು ನಡೆಸುತ್ತಿರುವವರು, ಪದವಿ ವಿದ್ಯಾಭ್ಯಾಸ ಮಾಡುತ್ತಿರುವವರು, ಸ್ವಾವಲಂಬಿ ಜೀವನ ನಡೆಸಬೇಕು ಎಂಬ ಆಲೋಚನೆ ಇಟ್ಟುಕೊಂಡವರು, ಈಗಾಗಲೇ ವಿವಿಧ ಸಂಸ್ಥೆಗಳಲ್ಲಿ ಆಡಳಿತಾಧಿಕಾರಿಗಳಾಗಿ ಹಾಗೂ ಎಚ್‌ಆರ್ ಆಗಿ ಕೆಲಸ ಮಾಡುತ್ತಿರುವವರು ಈ ವಿಚಾರ ಗೋಷ್ಟಿಗಳಿಗೆ ಭಾಗವಹಿಸಲು ಅರ್ಹರು. ಭಾಗವಹಿಸಬಹುದು, 800 ಜನರಿಗೆ ಮಾತ್ರ ಅವಕಾಶ ಇರುತ್ತದೆ. ಆಸಕ್ತರು ಭಾಗವಹಿಸುವಂತೆ ಎಸ್. ರುದ್ರೇಗೌಡರ ಅಭಿನಂದನಾ ಸಮಿತಿ ಕೋರಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post