ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಇಲ್ಲಿನ ಶ್ರೀ ಮಡಿವಾಳ ಮಾಚಿದೇವರ ದೇವಸ್ಥಾನದಲ್ಲಿ ಶ್ರೀ ಮಡಿವಾಳ ಮಾಚಿದೇವ ಸೇವಾ ಸಮಿತಿ ವತಿಯಿಂದ ಗುರುವಾರ ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವವನ್ನು ಆಚರಿಸಲಾಯಿತು.
ಶ್ರೀ ಮಡಿವಾಳ ಮಾಚಿದೇವರಿಗೆ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆದವು, ಜಯಂತ್ಯೋತ್ಸವದ ಹಿನ್ನೆಲೆ ದೇವಸ್ಥಾನಕ್ಕೆ ಪುಷ್ಪಲಂಕಾರ, ಬಾಳೆ ಕಂಬ, ತಳಿರು-ತೋರಣಗಳ ಅಲಂಕಾರ ಮಾಡಲಾಗಿತ್ತು, ನಂತರ ಮಡಿವಾಳ ಸಮಾಜದವರು ಮಾಚಿ ದೇವರಿಗೆ ಪೂಜೆ ಸಲ್ಲಿಸಿ ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು,
ಶ್ರೀ ಮಡಿವಾಳ ಮಾಚಿದೇವರ ಜಯಂತ್ಯೋತ್ಸವವನ್ನು ಸೊರಬ ತಾಲೂಕಿನ ಕರಡಿಗೆರೆ ಮಡಿವಾಳರ ಸಮುದಾಯ ಭವನದಲ್ಲಿ ಫೆಬ್ರುವರಿ 4 ಭಾನುವಾರದಂದು ಅತ್ಯಂತ ವಿಜೃಂಭಣೆಯಿಂದ ನಡೆಯಲಿದ್ದು, ಸಚಿವ ಎಸ್ ಮಧು ಬಂಗಾರಪ್ಪ Minister Madhu Bangarappa ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದಾರೆ. ಶ್ರೀ ಜಗದ್ಗುರು ಡಾ. ಬಸವ ಮಾಚಿದೇವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಮಡಿವಾಳ ಸಮಾಜದ ಬಾಂಧವರು ಪಾಲ್ಗೊಳ್ಳಬೇಕೆಂದು ತಾಪಂ ಮಾಜಿ ಸದಸ್ಯ ಎನ್.ಜಿ ನಾಗರಾಜ್ ತಿಳಿಸಿದರು.
ಮಡಿವಾಳ ಮಾಚಿದೇವ ಸೇವಾ ಸಮಿತಿ ಅಧ್ಯಕ್ಷ ದಿನೇಶ್ ಅಂಚೆ, ಸಮಾಜದ ಪ್ರಮುಖರಾದ ಎನ್ ಗುತ್ಯಪ್ಪ, ಪರಸಪ್ಪ ಓಲೇಕರ್, ಎನ್.ಜಿ ನಾಗರಾಜ್, ಎಂ.ಪಿ ರತ್ನಾಕರ್, ಗಣೇಶ್ ಮರಡಿ, ಮನೋಹರ, ಕೃಷ್ಣಪ್ಪ, ಗಂಗಾಧರ, ಹನುಮಂತಪ್ಪ, ಗಣಪತಿಪ್ಪ, ಕರಿಯಪ್ಪ, ರಾಘವೇಂದ್ರ, ಅಚ್ಚುತ, ಕೃಷ್ಣಪ್ಪ, ಎಂ.ಜಿ ಗಣಪತಿ, ಸುನಿಲ್, ರಾಕೇಶ್, ಶರತ್, ಭರತ್ ಎಂ.ಕೆ, ವಿಶಾಲ್, ಸೇರಿದಂತೆ ಸಮಾಜದ ಹಿರಿಯರು, ಮಹಿಳೆಯರು, ಪಾಲ್ಗೊಂಡಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post