ಕಲ್ಪ ಮೀಡಿಯಾ ಹೌಸ್ | ಮುಂಬೈ |
ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದ ಬಾಲಿವುಡ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ (32) ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪೂನಮ್ ಪಾಂಡೆ Poonam Pandey ಅವರ ಮ್ಯಾನೇಜರ್ ಹಾಗೂ ಅವರ ಟೀಮ್ ಈ ಕುರಿತಾಗಿ ಇನ್ಸ್‌ಟಾಗ್ರಾಮ್‌ನಲ್ಲಿ ಅಧಿಕೃತವಾಗಿ ಪೋಸ್ಟ್ ಮಾಡಿದ್ದು, ಗರ್ಭಕೋಶದ ಕ್ಯಾನ್ಸರ್‌ನಿಂದ ಸಾವನನ್ನಪ್ಪಿದ್ದಾರೆ. ಇಂದಿನ ಬೆಳಗ್ಗೆಯು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಪೂನಂ ಪಾಂಡೆ ಅವರು ಗರ್ಭಕಂಠ ಕ್ಯಾನ್ಸರ್‌ನಿಂದ ಅಗಲಿದರು ಎಂದು ಹೇಳಲು ಭಾರಿ ದುಃಖವಾಗುತ್ತಿದೆ. ಜೀವನದಲ್ಲಿ ಅವರು ಯಾರನ್ನೇ ಭೇಟಿಯಾದರೂ, ಪ್ರೀತಿ ಹಾಗೂ ವಿನಯದಿಂದ ವರ್ತಿಸಿದ್ದರು. ಅವರ ಖಾಸಗಿ ಹಾಗೂ ವೈಯಕ್ತಿಕ ಬದುಕಿನ ಬಗ್ಗೆ ಯಾರೂ ಮಾತನಾಡಬಾರದು ಎಂಬುದಾಗಿ ಮನವಿ ಮಾಡಿದ್ದಾರೆ.
ಪೂನಮ್ ಪಾಂಡೆ ಅವರು ಉತ್ತರಪ್ರದೇಶದ ಕಾನ್ಪುರದ ಮನೆಯಲ್ಲಿ ನಿಧನರಾಗಿದ್ದಾರೆ ಎನ್ನಲಾಗಿದ್ದು, ಮೂಲತಃ ಬಿಹಾರದವರಾದ ಪೂನಂ ಪಾಂಡೆ ಬೋಲ್ಡ್ ಫೋಟೊಗಳು, ಬೋಲ್ಡ್ ನಟನೆ ಹಾಗೂ ವಿವಾದಾತ್ಮಕ ಹೇಳಿಕೆಗಳಿಂದ ಪ್ರಸಿದ್ಧರಾಗಿದ್ದರು. ಬಿಹಾರದಲ್ಲಿ ಜನಿಸಿ, ಮುಂಬೈನಲ್ಲಿ ಬೆಳೆದ ಇವರು ಮೊದಲು ಮಾಡೆಲಿಂಗ್ ಕ್ಷೇತ್ರ ಪ್ರವೇಶಿಸಿದರು. 2013ರಲ್ಲಿ ನಶಾ ಎಂಬ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶಿಸಿದ ಪೂನಂ ಪಾಂಡೆ, ಭೋಜ್‌ಪುರಿಯ ಅದಾಲತ್, ತೆಲುಗಿನಲ್ಲಿ ಮಾಲಿನಿ & ಕೊ., ಹಿಂದಿಯ ಜಿಎಸ್‌ಟಿ-ಗಲ್ತಿ ಸಿರ್ಫ್ ತುಮ್ಹಾರಿ ಹಾಗೂ ದಿ ಜರ್ನಿ ಆಫ್ ಕರ್ಮ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿದ್ದರು.
ಕನ್ನಡ ಸಿನಿಮಾದಲ್ಲೂ ಪೂನಂ ಪಾಂಡೆ ಛಾಪು ಇದೆ. ಅವರು 2014ರಲ್ಲಿ ಬಿಡುಗಡೆಯಾದ ಲವ್ ಈಸ್ ಪಾಯ್ಸನ್ ಕನ್ನಡ ಸಿನಿಮಾದಲ್ಲಿ ಹಾಡೊಂದಿಗೆ ಹೆಜ್ಜೆ ಹಾಕಿದ್ದರು. ಇದರ ಜೊತೆಗೆ ಹಲವು ಬಾಲಿವುಡ್ ಸಿನಿಮಾಗಳಲ್ಲಿಯೂ ಪೂನಂ ನಟಿಸಿದ್ದಾರೆ.
2011ರಲ್ಲಿ ಭಾರತ ಕ್ರಿಕೆಟ್ ತಂಡವು ವಿಶ್ವಕಪ್ ಗೆದ್ದರೆ ತಂಡ ಎದುರು ನಾನು ಸಂಪೂರ್ಣವಾಗಿ ಬೆತ್ತಲಾಗುವೆ ಎಂದು ಹೇಳುವ ಮೂಲಕ ದೇಶಾದ್ಯಂತ ಸುದ್ದಿಯಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















