ಕಲ್ಪ ಮೀಡಿಯಾ ಹೌಸ್ | ಹರಿಯಾಣ |
ಪ್ರಧಾನಿ ನರೇಂದ್ರ ಮೋದಿ PM Narendra Modi ಸರ್ಕಾರದ ವಿರುದ್ಧ ಹರಿಯಾಣ ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಇವರುಗಳು ನವದೆಹಲಿ ಕಡೆಗೆ ಹೊರಟಿದ್ದಾರೆ.
ಒಂದೆಡೆ ದೆಹಲಿ ಕಡೆಗೆ ಹೊರಟಿರುವ ಪ್ರತಿಭಟನಾಕಾರರನ್ನು ತಡೆಯಲು ದೆಹಲಿ ಪೊಲೀಸರು ಸಿದ್ದತೆ ನಡೆಸಿದ್ದಾರೆ. ಆದರೆ ತಮ್ಮನ್ನು ಎದುರಿಸಲು ಪ್ರತಿಭಟನಾಕಾರರು ಮಾಡಿಕೊಂಡಿರುವ ಖತರ್ನಾಕ್ ಸಿದ್ದತೆ ಕಂಡು ಭದ್ರತಾ ಸಿಬ್ಬಂದಿ ದಂಗಾಗಿದ್ದಾರೆ.

Also read: ಉತ್ತರಾಖಂಡ್ ಗಲಭೆ | ಬೆಂಕಿ ಹಚ್ಚಿದವರ ಮನೆಗೆ ಬುಲ್ಡೋಜರ್ | ಸಿದ್ದತೆ ಅಂತಿಮ
ಗುಪ್ತಚರ ಇಲಾಖೆಯ ಮಾಹಿತಿಯಂತೆ, 5000 ಟ್ರಾಕ್ಟರ್ ಜೊತೆಯಲ್ಲಿ 25000 ಪ್ರತಿಭಟನಾಕಾರರು ದೆಹಲಿ ಕಡೆ ಹೊರಟಿದ್ದಾರೆ. ಅತ್ಯಂತ ಪ್ರಮುಖ ವಿಚಾರ ಎಂದರೆ, ಪೊಲೀಸರ ಬ್ಯಾರಿಕೇಡ್‌ಗಳನ್ನು ಮುರಿಯಲು ಟ್ರಾಕ್ಟರ್‌ಗಳಿಗೆ ಹೈಡ್ರಾಲಿಕ್ ಉಪಕರಣಗಳನ್ನು ಅಳವಡಿಸಲಾಗಿದೆ. ಅಶ್ರುವಾಯು ಶೆಲ್‌ಗಳ ವಿರುದ್ಧ ಹೋರಾಡಲು ಬೆಂಕಿ-ನಿರೋಧಕ ಹಾರ್ಡ್-ಶೆಲ್ ಟ್ರೇಲರ್‌ಗಳನ್ನು ಸಿದ್ಧಪಡಿಕೊಂಡಿದ್ದು, ಪೊಲೀಸರ ತಡೆ ಪ್ರಯತ್ನ ವಿಫಲಗೊಳಿಸಲು ಎಲ್ಲ ತಯಾರಿ ಅವರು ಮಾಡಿಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post