ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ದೇಶದ ಉದ್ದಗಲದಲ್ಲಿ ನಿರಂತರವಾಗಿ ಸಂಚರಿಸುತ್ತ ವಿದ್ವತ್ಪೂರ್ಣವಾದ ಪ್ರವಚನಗಳ ಮೂಲಕ ಧಾರ್ಮಿಕ ಆಚರಣೆ (ಏಕಾದಶಿ ಉಪವಾಸ-ಚಾತುರ್ಮಾಸ್ಯ ಆಚರಣೆ-ಅನುಷ್ಠಾನ)ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿರುವ ಕಾರ್ಯ ಅತ್ಯಂತ ಪ್ರಶಂಸನಾರ್ಹ ಎಂದು ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ಹೇಳಿದರು.
ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಎದುರಿನ ಶ್ರೀಮದ್ ಉತ್ತರಾದಿಮಠದ ಶ್ರೀ ದಿಗ್ವಿಜಯ ಲಕ್ಷ್ಮೀನರಸಿಂಹ ದೇವಸ್ಥಾನದ ಆವರಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲರ್ಬುಗಿಯ ದಾಸ ಸೌರಭ, ಶ್ರೀಮದ್ವಾದಿರಾಜ ಆರಾಧನಾ ಟ್ರಸ್ಟ್; ನಾದವೈಭವ ಸಂಗೀತ ವಿದ್ಯಾಲಯ, ಶಿವಮೊಗ್ಗದ ಶ್ರೀ ಗುರುಗುಹ ಸಂಗೀತ ಮಹವಿದ್ಯಾಲಯ ಮತ್ತು ಅನುಗ್ರಹ ಸಂಗೀತ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಪುರಂದರದಾಸರ ಆರಾಧನಾ ಮಹೋತ್ಸವ’ ಗಾನ- ಜ್ಞಾನ ಯಜ್ಞ ವನ್ನು Purandara Dasaru ಉದ್ಘಾಟಿಸಿ ಅನುಗ್ರಹ ಸಂದೇಶ ನೀಡಿದರು.
ವಿದ್ವಾನ್ ಆರ್.ಕೆ. ಪದ್ಮನಾಭ ಮತ್ತು ಶಿಷ್ಯವೃಂದದಿಂದ ಪುರಂದರದಾಸರ ಕೃತಿಗಳ ಗೋಷ್ಠಿ ಗಾಯನದೊಂದಿಗೆ ಪುರಂದರ ದಾಸರ ಬೃಹತ್ ಶಿಲಾ ವಿಗ್ರಹಕ್ಕೆ ವಿಶೇಷ ಅಭಿಷೇಕದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಇದೇ ಸಂದರ್ಭದಲ್ಲಿ ಖ್ಯಾತ ವಿದ್ವಾಂಸ, ಶ್ರೀವ್ಯಾಸ ಮಧ್ವ ಸೇವಾ ಪ್ರತಿಷ್ಠಾನದ ನಿರ್ದೇಶಕ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರವರಿಗೆ ಪ್ರತಿಷ್ಠಿತ ಮಧ್ವ ಪುರಂದರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಜಯತೀರ್ಥ ವಿದ್ಯಾಪೀಠದ ಕುಲಪತಿ ಪಂ.ಗುತ್ತಲ್ ರಂಗಾಚಾರ್, ಶ್ರೀವಾರಿ ಫೌಂಡೇಷನ್‌ನ ಎಸ್. ಶಮೂರ್ತಿ ಮತ್ತು ಖ್ಯಾತ ಗಾಯಕ ಗಾನಕಲಾಭೂಷಣ ವಿದ್ವಾನ್ ಆರ್.ಕೆ. ಪದ್ಮನಾಭರವರು ಭಾಗವಹಿಸಿದ್ದರು. ಆಧ್ಯಾತ್ಮಿಕ ಮತ್ತು ಸಮಾಜಸೇವೆಗಾಗಿ ವಟ್ಟಂಗಾಡ್ ಕೃಷ್ಣಾಚಾರ್ಯ, ಪತ್ರಿಕೋದ್ಯಮ-ಹಿರಿಯ ಪತ್ರಕರ್ತ ಶೇಷಚಂದ್ರಿಕ ಮತ್ತು ದಾಸಸಾಹಿತ್ಯ ಪ್ರಸರಣ-ತಂತ್ರಜ್ಞ ದಂಡಿನ್ ಅನಂತರಾವ್‌ರವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಖ್ಯಾತ ಹಿಂದೂಸ್ತಾನಿ ಗಾಯಕ ನಿವೃತ್ತ ಐಎಎಸ್ ಅಧಿಕಾರಿ ಡಾ. ಪಂ. ಮುದ್ದುಮೋಹನ್‌ರವರಿಂದ ದಾಸವಾಣಿ ನಡೆಯಿತು.
ಮಧ್ಯಾರಾಧನಾ ಮಹೋತ್ಸವದ ಅಂಗವಾಗಿ ಪುರಂದರದಾಸರ ಕುರಿತು ವಿಶೇಷ ಉಪನ್ಯಾಸ ಖ್ಯಾತ ವಾಗ್ಮಿ ಮತ್ತು ಆಧ್ಯಾತ್ಮ ಚಿಂತಕ ಡಾ. ಪಂ. ಆತನೂರು ಭೀಮಸೇನಾಚಾರ್ಯ ನಡೆಸಿಕೊಟ್ಟರು ಮತ್ತು ಖ್ಯಾತ ಗಾಯಕ ಡಾ. ರಾಯಚೂರು ಶೇಷಗಿರಿದಾಸ್‌ರವರಿಂದ ದಾಸರ ಪದಗಳ ಗಾಯನ ಆಯೋಜಿಸಿತ್ತು.
ಸಂಜೆ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಭಾಗವಹಿಸಿ. ಖ್ಯಾತ ಹಿಂದೂಸ್ತಾನಿ ಗಾಯಕ ಡಾ. ಪಂ. ನಾಗರಾಜರಾವ್ ಹವಾಲ್ದಾರ್ ಅವರಿಗೆ ‘ಪುರಂದರ ಸಂಗೀತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗುಲಬರ್ಗಾದ ಸಂಶೋಧಕರಾದ ಸುಮಿತ್ರ ಜಯತೀರ್ಥ ಪ್ರತಿನಿಧಿ, ಅಂಕಣಕಾರ ಶ್ರೀಧರ ರಾಯಸಂ ಮತ್ತು ಹಾರ್ಮೋನಿಯಂ ವಾದಕ ಪಂ. ಕೃಷ್ಣ ಹುನಗುಂದರವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.
ಶ್ರೀ ಗುರುಗುಹ ಸಂಗೀತ ಮಹಾವಿದ್ಯಾಲಯ, ಬೆಂಗಳೂರು ಮತ್ತು ಶಿವಮೊಗ್ಗ ಶ್ರೀ ಅನುಗ್ರಹ ಸಂಗೀತ ಮಹಾವಿದ್ಯಾಲಯ, ಬೆಂಗಳೂರು ಮತ್ತು ತುಮಕೂರು ವಿದ್ಯಾರ್ಥಿಗಳಿಂದ ವಿದ್ವಾನ್ ಶೃಂಗೇರಿ ಹೆಚ್.ಎಸ್. ನಾಗರಾಜ್ ಮತ್ತು ವಿದ್ವಾನ್ ಜೆ.ಎಸ್. ಶ್ರೀಕಂಠಭಟ್ ನೇತೃತ್ವದಲ್ಲಿ ಪುರಂದರದಾಸರ ನವರತ್ನಮಾಲಿಕ ಕೃತಿಗಳ ಗೋಷ್ಠಿ ಗಾಯನಕ್ಕೆ ಪಕ್ಕವಾದ್ಯದಲ್ಲಿ ವಯೋಲಿನ್ ವಿದ್ವಾನ್ ವೆಂಕಟೇಶ್ ಜೋಷಿಯಾರ್ ಮತ್ತು ಮೃದಂಗ ಪಿ.ಎಸ್. ಶ್ರೀಧರ್ ಸಾಥ್ ನೀಡಿದರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಸೇಡಂನ ಹರಿದಾಸ ಸಂಶೋಧಕ ಡಾ. ವಾಸುದೇವ ಅಗ್ನಿಹೋತ್ರಿ ಮತ್ತು ಖ್ಯಾತ ಹೃದ್ರೋಗ ತಜ್ಞ ಡಾ. ವೇಣುಗೋಪಾಲ ರಾಮರಾವ್ ಭಾಗವಹಿಸಿದ್ದರು. ಶ್ರೀನಿವಾಸ ಲೋಕ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಬಿ.ಎನ್. ರಾಜೇಂದ್ರರವರಿಗೆ ಹರಿದಾಸ ಅನುಗ್ರಹ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಶಿಕಲ ನಾಗರಾಜನ್ ನಿರೂಪಣೆಯಲ್ಲಿ ವಿದುಷಿ ಪವಿತ್ರ ವೈಭವರಾವ್‌ರವರಿಂದ ಭರತನಾಟ್ಯ, ವಿದುಷಿ ಶುಭ ಸಂತೋಷ್‌ರವರ ಗಾಯನ ಮತ್ತು ಖ್ಯಾತ ಉಪನ್ಯಾಸಕಾರ ವಿದ್ವಾನ್ ಕಲ್ಲಾಪುರ ಪವಮಾನಾಚಾರ್ಯರವರಿಂದ ಸಂಪ್ರವಚನವನ್ನು ಏರ್ಪಡಿಸಲಾಗಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















