ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಸಂಗೀತ್ ಸಮರ್ಪಣ್ ಟ್ರಸ್ಟ್ ವತಿಯಿಂದ ಮಾ.2ರಂದು ಸಂಜೆ 6ಕ್ಕೆ ಕುವೆಂಪು ರಂಗಮಂದಿರದಲ್ಲಿ ಸಂಗೀತ ಸ್ವರಧಾರಾ (ಆವೃತ್ತಿ-2)ವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ ಎಂದೂ ಮರೆಯದ ಹಳೆಯ-ಸುಮಧುರ ಹಿಂದಿ ಮತ್ತು ಕನ್ನಡ ಚಲನಚಿತ್ರ ಹಾಡುಗಳ ಗೀತಗಾಯನ ನಡೆಯಲಿದೆ ಎಂದು ಟ್ರಸ್ಟ್ ನ ಅಧ್ಯಕ್ಷೆ ಸುರೇಖಾ ಹೆಗಡೆ ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗಾಯಕರು ಹಾಗೂ ಸಂಗೀತ ನಿರ್ದೇಶಕರುಗಳಾದ ಬೆಂಗಳೂರು ಹ್ಯಾರೀಸ್ ಶಶಿಕಿರಣ್, ಮೆಲ್ವಿನ್ ಲೀಮಾ, ಬಸವರಾಜ್ ರಾಣೇಬೆನ್ನೂರು, ರಾಮ್‍ರಾವ್ ರಂಗಧೋಳ್, ವಿಠ್ಠಲ್ ರಂಗಧೋಳ್, ನಂದೀಶ್ ಹೊಸಪೇಟೆ ಭಾಗವಹಿಸಲಿದ್ದು, ಸಮನ್ವಯ ಕಾಶಿ ಕಾರ್ಯಕ್ರಮ ನಿರೂಪಿಸಲಿದ್ದಾರೆ ಎಂದರು.
Also read: ನೊಂದಿತರ ಧ್ವನಿಯಾಗಿ ಜೆಡಿಎಸ್ ಕಾರ್ಯ ನಿರ್ವಹಣೆ: ಮಾಜಿ ಶಾಸಕ ಪ್ರಸನ್ನ ಕುಮಾರ್
ಕಾರ್ಯಕ್ರಮವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಯಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ ಭಾಗವಹಿಸಲಿದ್ದಾರೆ. ಟ್ರಸ್ಟ್‍ನ ಮಾರ್ಗದರ್ಶಕರಾದ ಲಕ್ಷ್ಮೀನಾರಾಯಣ ಕಾಶಿ ಅವರಿಗೆ ಸನ್ಮಾನಿಸಲಾಗುವುದು ಎಂದ ಅವರು, ಪ್ರವೇಶ ಉಚಿತ ಎಂದರು.
ಪತ್ರಿಗಾಗೋಷ್ಠಿಯಲ್ಲಿ ವೈದ್ಯ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















