ಕಲ್ಪ ಮೀಡಿಯಾ ಹೌಸ್ | ಉಡುಪಿ |
ಶ್ರೀಕೃಷ್ಣ ಮಠ Shrikrishna Mutt ಹಾಗೂ ಅಷ್ಟ ಮಠಗಳ ಭಕ್ತರಾದ ಮುಂಬೈ ಉದ್ಯಮಿಯೊಬ್ಬರು ಅಯೋಧ್ಯೆ Ayodhya ರಾಮನ ಸೇವೆಗಾಗಿ ಬೃಹತ್ ಗಾತ್ರದ ಬೆಳ್ಳಿ ಕಾಲು ದೀಪದ ಕಂಬವನ್ನು ಕಾಣಿಕೆಯಾಗಿ ನೀಡಿದ್ದಾರೆ.
ಪೇಜಾವರ ಮಠದ ಮಹಾನ್ ಭಕ್ತರಾದ ಉದ್ಯಮಿ ನಾಗೇಂದ್ರ ಆಚಾರ್ಯ ಹಾಗೂ ಅರುಣಾ ಆಚಾರ್ಯ ದಂಪತಿ ಈ ಕಾಣಿಕೆ ಅರ್ಪಿಸಿದ್ದಾರೆ.
ಹೊಸ ದೀಪಗಳನ್ನು ರಾಮಮಂದಿರದ ಗರ್ಭಗುಡಿಯ ಮುಂಭಾಗದಲ್ಲಿ ಪೇಜಾವರ ಸ್ವಾಮೀಜಿ Pejawara Shri ಪ್ರಜ್ವಲಿಸಿದರು. ಪೇಜಾವರ ಮಠದ ಶಿಷ್ಯರಾಗಿರುವ ದಂಪತಿ ರಾಮಸೇವೆ ಮಾಡುವ ಸಂಕಲ್ಪ ಮಾಡಿದ್ದು, ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಗಳ ಮೂಲಕ ಅವರು ದೊಡ್ಡ ದೊಡ್ಡ ದೀಪಗಳನ್ನು ಅರ್ಪಿಸಿದ್ದಾರೆ.
Also read: ಅಸಾಧ್ಯವಾದುದು ಯಾವುದೂ ಇಲ್ಲ, ವಿದ್ಯಾರ್ಥಿಗಳೇ ಸವಾಲು ಎದುರಿಸಿ: ರಾಜೇಂದ್ರ ಭಟ್ ಕರೆ
ಎರಡು ದೀಪಗಳು ತಲಾ ಮೂರೂವರೆ ಅಡಿ ಎತ್ತರವಿದ್ದು, ತಲಾ 13.5 ಕೆಜಿ ತೂಕವಿವೆ. ಉದ್ಯಮಿ ಆಚಾರ್ಯ ದಂಪತಿ, ಎ.ಕೆ. ಆರ್. ಟ್ರಸ್ಟ್ ವಿಶ್ವಸ್ಥರೂ ಆಗಿದ್ದು ಉಡುಪಿಯ ಕೃಷ್ಣಮಠ, ಅಷ್ಟ ಮಠಗಳ ಭಕ್ತರಾಗಿ ಸೇವೆ ಸಲ್ಲಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















