ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಲ್ಲಿನ ರಾಮೇಶ್ವರಂ ಕೆಫೆಯಲ್ಲಿ #RameshwaramCafe ನಿನ್ನೆ ನಡೆದ ಸ್ಪೋಟಕ್ಕೂ ಶಿವಮೊಗ್ಗದಲ್ಲಿ #Shivamogga ಕಳೆದ ವರ್ಷದ ನಡೆದ ಟ್ರಯಲ್ ಬ್ಲಾಸ್’ಗೂ ಸಾಮ್ಯತೆಯಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಕುರಿತಂತೆ ವರದಿಯಾಗಿದ್ದು, ಕಳೆದ ವರ್ಷ ಶಿವಮೊಗ್ಗದಲ್ಲಿ ಉಗ್ರರು ನಡೆಸಿದ ಟ್ರಯಲ್ ಬ್ಲಾಸ್ಟ್’ಗೂ #TrailBlast ನಿನ್ನೆ ರಾಮೇಶ್ವರಂ ಕೆಫೆಯಲ್ಲಿ ನಡೆದ ಸ್ಪೋಟಕ್ಕೂ ಸಾಮ್ಯತೆಯಿದೆ ಎಂದು ವರದಿಯಾಗಿದೆ.
ಶಿವಮೊಗ್ಗದಲ್ಲಿ ನಡೆದ ಟ್ರಯಲ್ ಬ್ಲಾಸ್ಟ್’ನಲ್ಲಿ ಬಳಸಲಾದ ಕೆಮಿಕಲ್, ಪ್ಲಾಸ್ಟಿಕ್ ವಸ್ತುಗಳು, ಡಿಟೋನೇರ‍್ಸ್ #Detonators ಸ್ಪೋಟಕ ಅಂಶಗಳು, ಟೈಮರ್ #Timer ಹಾಗೂ ಮೆಟಲ್ ಅಂಶಗಳ ರೀತಿಯದ್ದೇ ರಾಮೇಶ್ವರಂ ಕೆಫೆಯ ಸ್ಪೋಟದಲ್ಲೂ ಸಹ ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಹೀಗಾಗಿ, ಎರಡೂ ಪ್ರಕರಣಕ್ಕೆ ಲಿಂಕ್ ಇರಬಹುದೇ ಎಂಬ ಆಯಾಮದಲ್ಲೂ ಸಹ ತನಿಖೆ ನಡೆದಿದೆ ಎಂದು ತಿಳಿದುಬಂದಿದೆ.
ಇನ್ನು, ಕಳೆದ ವರ್ಷ ಮಂಗಳೂರಿನ #Mangalore ಆಟೋದಲ್ಲಿ ನಡೆದ ಕುಕ್ಕರ್ ಸ್ಪೋಟದಲ್ಲಿ ಬಳಸಲಾದ ವಸ್ತುಗಳು ಹಾಗೂ ರಾಮೇಶ್ವರಂ ಕೆಫೆಯಲ್ಲಿನ ಸ್ಪೋಟದಲ್ಲಿ ಬಳಸಲಾಗಿರುವ ಸ್ಪೋಟಕ ವಸ್ತುಗಳಿಗೂ ಸಾಮ್ಯತೆಯ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಮಂಗಳೂರು ಬ್ಲಾಸ್ಟ್ ಪ್ರಕರಣದ ತನಿಖಾಧಿಕಾರಿಗಳ ತಂಡಗಳು ಬೆಂಗಳೂರಿಗೆ ತೆರಳಿದ್ದು, ಅಲ್ಲಿನ ಅಧಿಕಾರಿಗಳ ಜೊತೆಯಲ್ಲಿ ಚರ್ಚೆ ನಡೆಸುತ್ತಿದೆ.
ಈ ಕುರಿತಂತೆ ಮಾತನಾಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್ #DKShivakumar ರಾಮೇಶ್ವರಂ ಕೆಫೆ ಪ್ರಕರಣಕ್ಕೂ ಶಿವಮೊಗ್ಗದ ಟ್ರಯಲ್ ಬ್ಲಾಸ್ಟ್, ಮಂಗಳೂರು ಕುಕ್ಕರ್ ಬ್ಲಾಸ್ಟ್’ಗೂ ಸಾಮ್ಯತೆ ಕಂಡುಬಂದಿದೆ. ಹೀಗಾಗಿ, ಅಲ್ಲಿನ ತನಿಖಾಧಿಕಾರಿಗಳು ಬೆಂಗಳೂರಿಗೆ ಆಗಮಿಸಿದ್ದು ವಿಚಾರಣೆ ನಡೆಯುತ್ತಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post