ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಂತಾರಾಷ್ಟ್ರೀಯ ಮಹಿಳಾ ದಿನದ International Women’s Day ಗೌರವಾರ್ಥವಾಗಿ ಜೈನ್ ಪಬ್ಲಿಕ್ ಶಾಲೆ Jain Public School ವತಿಯಿಂದ ಮಾ.10ರಂದು ಫೆಮಥಾನ್ ಕಾರ್ಯಕ್ರಮ ಆಯೋಜಿಸಲಾಗಿದೆ.
ಸ್ತನ ಕ್ಯಾನ್ಸರ್ ರೋಗಿಗಳಿಗೆ ಹಣ ಸಂಗ್ರಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದ್ದು, ಪೆಮಥಾನ್‌ನಲ್ಲಿ ಭಾಗವಹಿಸಲು ಪಾವತಿಸುವ ನೋಂದಣಿ ಶುಲ್ಕ ಸ್ತನ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಸಂದಾವಾಗಲಿದ್ದು, ಬೆಳಿಗ್ಗೆ 6 ಗಂಟೆಗೆ ರನ್ ಫಾರ್ ಫೆಮಥಾನ್ ಆರಂಭಗೊಳ್ಳಲಿದೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆ ಕೋರಿದೆ.
ಮೊದಲ 500 ನೋಂದಣಿಗಳಿಗೆ ಕಾಂಪ್ಲಿಮೆಂಟರಿ ಟೀಶರ್ಟ್‌ಗಳು ಮತ್ತು ಕ್ಯಾಪ್‌ಗಳನ್ನು ಒದಗಿಸಲಾಗುತ್ತದೆ. ಹಾಗೂ ಮ್ಯಾಮೊಗ್ರಫಿ ಮತ್ತು ಗರ್ಭಕಂಠದ ಕ್ಯಾನರ್ ಸ್ಕ್ರೀನಿಂಗ್‌ಗಾಗಿ ಮಹಿಳೆಯರಿಗೆ ಆರೋಗ್ಯ ಕೂಪನ್‌ಗಳನ್ನು ನೀಡಲಾಗುವುದು.
Also read: ಶಿವರಾತ್ರಿಗೆ ಮೋದಿ ಗುಡ್ ನ್ಯೂಸ್ | ರಾಜ್ಯಸಭೆಗೆ ಸುಧಾಮೂರ್ತಿ ನಾಮ ನಿರ್ದೇಶನ
ಮೊದಲ 3 ವಿಜೇತರಿಗೆ ಟ್ರೋಫಿಗಳು ಮತ್ತು ಭಾಗವಹಿಸುವಿಕೆ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಗುವುದು. ಅರ್ಥಪೂರ್ಣ ಕಾರಣಕ್ಕೆ ಕೊಡುಗೆ ನೀಡಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು! [ಫೆಮಥಾನ್ ನೋಂದಣಿ ಲಿಂಕ್] ನಲ್ಲಿ ಹೆಸರು ನೋಂದಾಯಿಸಿ:
OR
OR
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















