ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಶ್ರೀ ದೇವಗಿರಿ ಲಕ್ಷ್ಮೀಕಾಂತ ಸಂಘದ ವತಿಯಿಂದ ಮಾ.10 ಭಾನುವಾರದಂದು 36ನೇ ವರ್ಷದ ಪುರಂದರದಾಸರ ಸಂಸ್ಮರಣೋತ್ಸವ ಆಯೋಜಿಸಲಾಗಿದ್ದು, ಶ್ರೀ ಸುವಿದ್ಯೇಂದ್ರ ತೀರ್ಥ ಶ್ರೀಪಾದ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ನಗರದ ಜಯನಗರ 8ನೇ ಬ್ಲಾಕ್‌ನ ಬೆಳಗೋಡು ಕಲಾ ರುಮಂಟಪದಲ್ಲಿ ತಿರುಮಲ ತಿರುಪತಿ ದೇವಸ್ಥಾನದ ದಾಸಸಾಹಿತ್ಯ ಪ್ರಾಜೆಕ್ಟ್ ಹಾಗೂ ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಯೋಗದಲ್ಲಿ ಬೆಳಿಗ್ಗೆ 7ರಿಂದ ಮಂತ್ರಾಲಯ ಗುರುಸಾರ್ವಭೌಮ ದಾಸ ಸಾಹಿತ್ಯ ಪ್ರಾಜೆಕ್ಟ್ ಕೆ.ಅಪ್ಪಣ್ಣಾಚಾರ್ಯರ ನೇತೃತ್ವದಲ್ಲಿ ಸುಪ್ರಭಾತಸೇವೆ, ಸಾಮೂಹಿಕ ಭಜನೆ ನಂತರ ಅನುಗ್ರಹ ಸಂಗೀತ ಮಹಾವಿದ್ಯಾಲಯದ ವಿದ್ವಾನ್ ಜೆ.ಎಸ್.ಶ್ರೀಕಂಠಭಟ್ ಮತ್ತು ಶಿಷ್ಯವೃಂದದಿಂದ ಪಿಳ್ಳಾರಿ ಗೀತೆಗಳು ನಡೆಯಲಿದೆ.
ಬಳಿಕ ಕೆ. ಅಪ್ಪಣ್ಣಾಚಾರ್ಯರಿಂದ ಅನುಗ್ರಹ ವಚನ ನೀಡುವರು. ಸಮಾರಂಭದಲ್ಲಿ ವಿದ್ವಾನ್ ಮಾದನೂರು ಪವಮಾನಾಚಾರ್ಯರನ್ನು ಸನ್ಮಾನಿಸಲಾಗುವುದು. ಮುಖ್ಯ ಅತಿಥಿಗಳಾಗಿ ನಾಡಿನ ಖ್ಯಾತ ಹರಿದಾಸ ಸಾಹಿತ್ಯ ವಿದ್ವಾಂಸರಾದ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ, ಡಾ ಸುಭಾಷ್ ಕಾಖಂಡಕಿ , ವೆಂಕಟೇಶ ಮೂರ್ತಿ , ಡಾ.ವಾಸುದೇವ ಅಗ್ನಿಹೋತ್ರಿ, ಕಲ್ಲಾಪುರ ಪವಮಾನಚಾರ್‍ಯರು, ಡಾ.ಹ.ರಾ. ನಾಗರಾಜಾಚಾರ್‍ಯರು, ಡಾ.ಪರಶುರಾಮ ಬೆಟಗೇರಿ, ಪ್ರಸಿದ್ಧ ಗಾಯಕ ಪುತ್ತೂರು ನರಸಿಂಹ ನಾಯಕ್ , ಡಾ.ರಾಯಚೂರು ಶೇಷಗಿರಿದಾಸರು ಮತ್ತು ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ಆಗಮಿಸುವರು.
ಮಧ್ಯಾಹ್ನ ವಿದ್ವಾನ್ ರಾಘವೇಂದ್ರ ಸಿ.ಎನ್.ರಾಯಚೂರು ರವರಿಂದ ದಾಸವಾಣಿ , ಡಾ. ರಾಜಲಕ್ಷ್ಮಿ ಪಾರ್ಥಸಾರಥಿ , ಪುಷ್ಪಾ ಗುಪ್ತ , ಡಾ.ರೇಖಾಕಾಖಂಡಕಿ , ಪದ್ಮಾ ಕಾಖಂಡಕಿ , ಡಾ.ಚಂದ್ರಿಕಾ , ಡಾ,ರಮಾವಿಠಲ್ ಮುಂತಾದ ಮಹಿಳಾ ಹರಿದಾಸಿಣಿಯರಿಗೆ ಮತ್ತು ಸಂಘದ ಹಿರಿಯ ಸದಸ್ಯರಾದ ಸುಮನಾ ಬದಿನಾಥ್ , ವೇದಾವತಿ ಮತ್ತು ಪ್ರಮೀಳಾ ರವರಿಗೆ ಸನ್ಮಾ , ಸಂಜೆ ದೇವಗಿರಿ ಲಕ್ಷ್ಮೀ ಕಾಂತ ಸಂಘದವರು ನಡೆಸಿದ ಸಾಹಿತ್ಯಕ- ಸಾಂಸ್ಕೃತಿಕ ಆಟಗಳ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿನಿಯೋಗ , ಕಲಾಯೋಗಿ ಪುಲಿಕೇಶಿಕಸ್ತೂರಿ ರವರ ಶಾಂತಳಾ ಆರ್‍ಟ್ಸ್ ರವರಿಂದ ನೃತ್ಯ ರೂಪಕ ಆಯೋಜಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ : 97418 40330ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















