ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಾರ್ಚ್ 1ರಂದು ಸ್ಫೋಟ ಸಂಭವಿಸಿದ ಬಳಿಕ ಬಂದ್ ಆಗಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ Rameshwaram Cafe ಇಂದಿನಿಂದ ಮತ್ತೆ ಕಾರ್ಯ ಆರಂಭಿಸಿದೆ.
ಪೊಲೀಸ್ ಬಿಗಿ ಭದ್ರತೆಯಲ್ಲಿ ಕೆಫೆ ರೀಓಪನ್ ಮಾಡಿ ಗ್ರಾಹಕರಿಗೆ ಸೇವೆ ನೀಡಲಾಗುತ್ತಿದ್ದು, ಸ್ಫೋಟದ ಬಳಿಕ ಕೆಫೆಯಲ್ಲಿನ ಭದ್ರತೆ ಹೆಚ್ಚಳ ಮಾಡಲಾಗಿದೆ. ನಿವೃತ್ತ ಆರ್ಮಿ ಆಫೀಸರ್‌ಗಳಿಂದ ಕೆಫೆಗೆ ಭದ್ರತೆ ಒದಗಿಸಲಾಗಿದ್ದು, 2 ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ಕೆಫೆಗೆ ಬರುವ ಪ್ರತಿ ಗ್ರಾಹಕರನ್ನು ತಪಾಸಣೆಗೊಳಪಡಿಸಲಾಗುತ್ತಿದೆ. ಜನರ ಮೇಲೆ ನಿಗಾ ಇಡಲು 2 ವಾಚ್ ಡಾಗ್ಸ್‌ಗಳ ವ್ಯವಸ್ಥೆ ಮಾಡಲಾಗಿದೆ.
ಸ್ಫೋಟ ಸಂಭವಿಸಿದ ವೈಟ್ ಫೀಲ್ಡ್ ಬ್ರಾಂಚ್ ಮಾತ್ರವಲ್ಲದೆ ನಗರದಲ್ಲಿರುವ ರಾಮೇಶ್ವರ ಕೆಫೆಯ ಎಲ್ಲಾ ಬ್ರಾಂಚ್‌ಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕೆಫೆಯ ಒಟ್ಟು 1500 ಸಿಬ್ಬಂದಿಗಳಿಗೆ ರಕ್ಷಣಾ ತರಬೇತಿ ನೀಡಲಾಗುತ್ತಿದೆ.
Also read: ಶಿವಮೊಗ್ಗದಲ್ಲಿ ಗೀತಾ ಶಿವರಾಜ್ ಕುಮಾರ್ ಸ್ಪರ್ಧೆ: ಸಂಸದ ರಾಘವೇಂದ್ರ ಫಸ್ಟ್ ರಿಯಾಕ್ಷನ್
ಇನ್ನು ಕೆಫೆ ಕಾರ್ಯಾರಂಭಕ್ಕೂ ಮುನ್ನ ವಿಶೇಷ ಪೂಜೆ, ಹೋಮ-ಹವನಗಳು ಜರುಗಿದ್ದು, ಈ ಘಟನೆ ಭಾರತೀಯರ ಆತ್ಮಸ್ಥೈರ್ಯವನ್ನು ಕುಗ್ಗಿಸಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಇಂದು ರಾಮೇಶ್ವರಂ ಕೆಫೆ ಪುನರ್ ಆರಂಭವಾಗುತ್ತಿರುವುದು ಇದಕ್ಕೆ ಸಾಕ್ಷಿ. ಇದು ನಿಜವಾದ ಭಾರತೀಯರ ಶಕ್ತಿ ಎಂದು ರಾಮೇಶ್ವರಂ ಕೆಫೆಯ ಮಾಲೀಕ ರಾಘವೇಂದ್ರ ರಾವ್ ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post