ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಲೋಕಸಭಾ ಚುನಾವಣೆ #ParliamentElection2024 ಘೋಷಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ನ್ಯೂಸ್ 18 ಅಭಿಪ್ರಾಯ ಸಂಗ್ರಹಿಸಿ, ವರದಿ ಬಿಡುಗಡೆ ಮಾಡಿದ್ದು, ಪಿಎಂ ಮೋದಿ ಹ್ಯಾಟ್ರಿಕ್ ನಿಶ್ಚಿತ ಎಂದಿದೆ.
ನ್ಯೂಸ್ 18 ಅಭಿಪ್ರಾಯ ಸಂಗ್ರಹದ ಪ್ರಕಾರ ಎನ್’ಡಿಎ 411 ಸ್ಥಾನಗಳನ್ನು ಗಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ #PMModi ಅಧಿಕಾರಕ್ಕೆ ಏರಲಿದ್ದಾರೆ.

ಈ ಸಮೀಕ್ಷೆಯ ಪ್ರಕಾರ ಪಶ್ಚಿಮ ಬಂಗಾಳ, ಒಡಿಶಾ ಮತ್ತು ತೆಲಂಗಾಣದಲ್ಲಿ ಬಿಜೆಪಿ ನಂಬರ್ 1 ಪಕ್ಷವಾಗಲಿದೆ.
ಹಿಂದಿ ಹೃದಯಭೂಮಿ, ಗುಜರಾತ್, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಎನ್’ಡಿಎ #NDA ವ್ಯಾಪಕವಾಗಿದ್ದು, ದೇಶದಾದ್ಯಂತ ಕಮಲ ಕಮಾಲ್ ಮಾಡಲಿದೆ ಎಂದಿದೆ.
ಉತ್ತರ ಭಾರತದಲ್ಲಿ ಬಹುತೇಕ ಕಡೆ ಬಿಜೆಪಿ ಕ್ಲೀನ್ ಸ್ವೀಪ್
ಉತ್ತರ ಭಾರತದ ರಾಜಸ್ಥಾನ, ಗುಜರಾತ್, ಉತ್ತರಾಖಂಡ, ದಿಲ್ಲಿ, ಛತ್ತೀಸ್‌ಗಢ, ಮಧ್ಯ ಪ್ರದೇಶ ಸಹಿತ ಹಲವು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಪ್ರದರ್ಶನ ತೋರಲಿದೆ.
ಪಶ್ಚಿಮ ಬಂಗಾಲ, ತೆಲಂಗಾಣದಲ್ಲೂ ಎನ್‌ಡಿಎ ಹೆಚ್ಚಿನ ಸೀಟುಗಳನ್ನು ಗೆಲ್ಲಲಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಭಾರೀ ನಿರಾಸೆ ಎದುರಾಗಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post