ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಾನು ನಿಮ್ಮ ಮನೆಯ ಮಗಳು, ನನ್ನನ್ನು ಗೆಲ್ಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ Geetha Shivarajkumar ಮನವಿ ಮಾಡಿದರು.
ನಗರದ ಲಗಾನ್ ಕಲ್ಯಾಣ ಮಂದಿರದಲ್ಲಿ ನಿನ್ನೆ ಆಯೋಜಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಮನೆಯ ಮಗಳನ್ನು ಬರಿಗೈಯಲ್ಲಿ ಕಳಿಸಲು ಆಗುವುದಿಲ್ಲ. ಲೋಕಸಭೆಯಲ್ಲಿ ಜಿಲ್ಲೆಯ ಧ್ವನಿ ಆಗಿ ಕೆಲಸ ಮಾಡುತ್ತೇನೆ. ನಿಮ್ಮ ಜೊತೆಗೆ ಇಲ್ಲೇ ಇರುತ್ತೇನೆ. ನಿಮ್ಮೆಲ್ಲರ ಸೇವೆಗೆ ಒಂದು ಅವಕಾಶ ಕೊಡಿ. ಶಿವಮೊಗ್ಗದಿಂದ ಲೋಕಸಭೆಗೆ ಹೋಗುವ ಮೊದಲ ಮಹಿಳೆ ಆಗುತ್ತೇನೆ. ಯಾರಿಗೂ ಯಾವುದೇ ಕೆಟ್ಟ ಹೆಸರು ತರುವುದಿಲ್ಲ ಎಂದು ಭರವಸೆ ನೀಡಿದರು.
Also read: ರೈಲ್ವೆ ಸ್ಟೇಷನ್, ಏರ್’ಪೋರ್ಟ್ ರಾಘು ಸಹ ಹೌದು | ನಿಮ್ಮ ಹಾಗೆ ಗುದ್ದಲಿ ಗೋಪಾಲ ಅಲ್ಲ | ಮೇಘರಾಜ್ ಕೌಂಟರ್
ನನಗೆ ಎರಡು ವರ್ಷ ಇದ್ದಾಗ ತಂದೆ ಬಂಗಾರಪ್ಪ ಶಾಸಕರಾಗಿದ್ದರು. ಯಾವುದೇ ಬೇಧ ಇಲ್ಲದೇ ನನ್ನನ್ನು ಬೆಳೆಸಿದ್ಧಾರೆ. ನನ್ನನ್ನೂ ಅಕ್ಕ ತಂಗಿ ರೀತಿ ತಗೋಬೇಕು. ಕಳೆದ ಚುನಾವಣೆ ಕೇವಲ ಹದಿನೇಳು ದಿನ ಮಾತ್ರ ಪ್ರಚಾರ ಮಾಡಿದ್ದೆ. ಹಾಗಾಗಿ ಸೋಲು ಕಾಣಬೇಕಾಯಿತು. ಈಗ ಗ್ಯಾರಂಟಿ ಯೋಜನೆ ಬಗ್ಗೆ ಮನೆ ಮನೆಗೆ ತಲುಪಿಸಿ. ನುಡಿದಂತೆ ನಡೆದ ಸರ್ಕಾರ ಇದು ಎಂದರು.
ನಟ ಶಿವರಾಜ್ ಕುಮಾರ್ Shivarajkumar ಮಾತನಾಡಿ, ಈ ಸಲ ಶೇ.100ರಷ್ಟು ಗೆಲ್ಲಿಸುವ ಭರವಸೆ ಇದೆ. ಗೀತಾ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಕ್ಕೆ ಸಿಎಂ ಸಿದ್ದರಾಮಯ್ಯ, CM Siddaramaiah ಡಿಸಿಎಂ ಶಿವಕುಮಾರ್ DCM Shivakumar ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
2014 ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಯಾರಾದರೂ ಒಬ್ಬರು ಗೆಲ್ಲಬೇಕು. ಆದರೂ ಪರವಾಗಿಲ್ಲ. ಒಂದು ಅನುಭವ ಆಯಿತು. ಪ್ರೀತಿ ವಿಶ್ವಾಸ ಮಧ್ಯ ರಾಜಕೀಯ ಬರಲ್ಲ. ಒಂದು ಬಾಂಧವ್ಯ ಬೆಳೆಯುತ್ತದೆ ಎಂದರು.
ಗೀತಾ ಅವರು ನನ್ನ ಜೊತೆಗೆ 38 ವರ್ಷ ಸಂಸಾರ ಮಾಡಿದ್ದಾರೆ. ಇನ್ನೇನು ಅನುಭವ ಬೇಕು. ಜೀವನದಲ್ಲಿ ಸಾಕಷ್ಟು ನೋಡಿದ್ದಾರೆ. ಭೂಮಿ ತಾಯಿಗೆ ಹೆಣ್ಣನ್ನು ಹೋಲಿಸುತ್ತಾರೆ. ಹಾಗಾಗಿ ಗೀತಾ ಅವರನ್ನು ಯಾಕೆ ಒಮ್ಮೆ ಸಂಸದೆ ಮಾಡಬಾರದು ಎಂದರು.
ಹಿಂದಿನ ಚುನಾವಣೆ ಸೋಲಿನ ಬಗ್ಗೆ ಹೇಳುತ್ತಾ ಆಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ ಎಂಬ ಹಾಡು ಹೇಳಿ ಹುರಿದುಂಬಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post