ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಯಾರ ಹಣೆ ಬರಹದಲ್ಲಿ ಏನು ಬರೆದಿದೆ ಯಾರಿಗೆ ಗೊತ್ತು? ಯಾರೂ ಅದನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಸಂಸದ ಬಿ.ವೈ. ರಾಘವೇಂದ್ರ MP B Y Raghavendra ಮಾರ್ಮಿಕವಾಗಿ ನುಡಿದರು.
ತಮ್ಮ ನಿವಾಸದಲ್ಲಿ ಮಾತನಾಡಿದ ಅವರು, ಕೆ.ಎಸ್. ಈಶ್ವರಪ್ಪನವರ K S Eshwarappa ಹೇಳಿಕೆಗಳಿಗೆ ಮತದಾರ ಉತ್ತರ ನೀಡುತ್ತಾನೆ. ಅವರು ಕೂಡ ನಾಲ್ಕೈದು ಬಾರಿ ಶಾಸಕರಾಗಿ ಸಹಜವಾಗಿ ಬಿಜೆಪಿ ಕಾರ್ಯಕರ್ತರ ವಿಶ್ವಾಸ ಗಳಿಸಿದ್ದಾರೆ. ಹಾಗಾಗಿ ಅವರೊಂದಿಗೆ ಭಾಗವಹಿಸುವುದು ತಪ್ಪೇನು ಅಲ್ಲ ಎಂದರು.
Also read: ಗೀತಾರನ್ನು ನಿಮ್ಮ ಮಡಿಲಿಗೆ ಹಾಕಿದ್ದೇವೆ, ಆರ್ಶೀವಾದ ಮಾಡಿ: ಮಧು ಬಂಗಾರಪ್ಪ ಮನವಿ
ಹಣೆಬರಹದಲ್ಲಿ ಏನು ಬರೆದಿದೆ. ಅದನ್ನು ಯಾರು ಬದಲಾಯಿಸಲಾಗುವುದಿಲ್ಲ. ನನ್ನ ತಮ್ಮ ವಿಜಯೇಂದ್ರ Vijayendra ರಾಜ್ಯಾಧ್ಯಕ್ಷನಾಗುತ್ತಾನೆ ಎಂದು ನಮ್ಮ ಕುಟುಂಬದವರು ಯಾರು ಭಾವಿಸಿರಲಿಲ್ಲ. ಅವರ ಕ್ರೀಯಾಶೀಲತೆಯನ್ನು ನೋಡಿ ರಾಷ್ಟ್ರದ ಹಿರಿಯ ಬಿಜೆಪಿ ನಾಯಕರು ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದಾರೆ. ಪಕ್ಷವನ್ನು ಸದೃಢವಾಗಿ ಬೆಳೆಸುತ್ತಾರೆ ಎಂಬ ವಿಶ್ವಾಸ ಅವರಿಗೆ ಬಂದಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post