ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಿಮ್ಮ ಮಕ್ಕಳನ್ನು ಮೊಬೈಲ್’ನಿಂದ #Mobile ಸಾಧ್ಯವಾದಷ್ಟು ದೂರವಿಟ್ಟು, ಹೆಚ್ಚು ಹೆಚ್ಚು ಸಂಸ್ಕಾರ #Culture ಕಲಿಸಿ ಎಂದು ಖ್ಯಾತ ವೈದ್ಯೆ ಡಾ.ಮೈಥಿಲಿ ಸಲಹೆ ನೀಡಿದರು.
ನಗರದ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯಲ್ಲಿ #JainPublicSchool ನಡೆದ ಗ್ರಾಜುಯೇಷನ್ ಡೇ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Also read: ನಾಲ್ವರು ಭಯೋತ್ಪಾದಕರ ಹೆಡೆಮುರಿ ಕಟ್ಟಿದ ಸೇನೆ | ಅಪಾರ ಶಸ್ತ್ರಾಸ್ತ್ರ ಸೀಜ್
ಸಾಧ್ಯವಾದಷ್ಟು ನಿಮ್ಮ ಮಕ್ಕಳನ್ನು ಮೊಬೈಲ್’ನಿಂದ ದೂರ ಇರಿಸಿ. ಬದಲಾಗಿ ವಿವಿಧ ಬಗೆಯ ಹವ್ಯಾಸ, ಸಂಸ್ಕಾರಗಳನ್ನು ಕಲಿಸಿ ಉತ್ತಮ ಬದುಕಿಗೆ ದಾರಿ ತೋರಿಸಿ ಎಂದು ಕಿವಿ ಮಾತು ಹೇಳಿದರು.
ನಿಮ್ಮ ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ಚಿಕ್ಕವಯೋಮಾನದಿಂದಲೇ ಅವರಲ್ಲಿ ಉತ್ತಮ ವ್ಯಕ್ತಿತ್ವ, ಸ್ವಾಭಿಮಾನ, ಆತ್ಮವಿಶ್ವಾಸ ರೂಢಿಸಿಕೊಳ್ಳುವಂತಹ ಮನಃಸ್ಥಿತಿಯನ್ನು ಬೆಳೆಸಿ ಎಂದರು.
ಯುಕೆಜಿ ವಿದ್ಯಾರ್ಥಿಗಳು ಮೈಸೂರು ಪೇಟವನ್ನು ಹಾಕಿ ಸಾಂಪ್ರದಾಯಿಕ ಉಡುಗೆ ತೊಡುಗೆಯನ್ನು ಧರಿಸಿ ಗ್ರಾಜುಯೇಷನ್ ಸರ್ಟಿಫಿಕೇಟ್ ಅನ್ನು ಸ್ವೀಕರಿಸಿದರು. ಇದು ನಮ್ಮ ಭಾರತೀಯ ಸಂಸ್ಕೃತಿಯನ್ನು ಮತ್ತು ಆಚಾರ ವಿಚಾರವನ್ನು ಬೆಳೆಸುವಲ್ಲಿ ಜೈನ್ ಪಬ್ಲಿಕ್ ಶಾಲೆ ಮಾದರಿಯಾಗಿದೆ ಎಂದು ತೋರಿಸುತ್ತದೆ.
ಶಾಲೆಯ ಪ್ರಾಂಶುಪಾಲರಾದ ಪ್ರಿಯದರ್ಶಿನಿ, ಶಾಲಾ ಸಂಯೋಜಕಿ ದಿವ್ಯಶೆಟ್ಟಿ, ಶಾಲೆಯ ಸಿಇಒ ಸುಮಂತ್, ಸೌಲಭ್ಯ ವ್ಯವಸ್ಥಾಪಕರು ವಿಜಯ್ ಕುಮಾರ್, ಶಿಕ್ಷಕರು ವಿದ್ಯಾರ್ಥಿಗಳು ಆಡಳಿತ ಮತ್ತು ಆಡಳಿಕೇತರ ವರ್ಗದವರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post