ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಕಾಂಗ್ರೆಸ್ ಹಿರಿಯ ನಾಯಕ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಎನ್. ರಮೇಶ್ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ.
ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲೇ ರಮೇಶ್ ಅವರಿಗೆ ನೀಡಿರುವ ಹೊಸ ಜವಾಬ್ದಾರಿ ಅವರ ಪಕ್ಷ ನಿಷ್ಠೆ ಹಾಗೂ ಸಂಘಟನಾ ಕೌಶಲ್ಯಕ್ಕೆ ಒಲಿದಿರುವ ಫಲವಾಗಿದೆ.
ವಿದ್ಯಾರ್ಥಿ ದಿಸೆಯಿಂದಲೆ ಜನಪರ ಹೋರಾಟಗಳಿಂದ ಬಂದ ಎನ್. ರಮೇಶ್ ವಿದ್ಯಾರ್ಥಿ ಕಾಂಗ್ರೆಸ್, ಯುವ ಕಾಂಗ್ರೆಸ್, ಜಿಲ್ಲಾ ಅಧ್ಯಕ್ಷರಾಗಿ, ಯುವ ಕಾಂಗ್ರೆಸ್ ರಾಜ್ಯ ಪ್ರಧಾನಕಾರ್ಯದರ್ಶಿಯಾಗಿ ಹಂತ ಹಂತವಾಗಿ ಕಾಂಗ್ರೆಸ್’ನಲ್ಲಿ ತಮ್ಮ ಛಾಪು ಮೂಡಿಸಿದರು.
Also read: ರಾಜಕೀಯ ನಿವೃತ್ತಿ ಘೋಷಿಸಿದ ಸಿಎಂ ಸಿದ್ದರಾಮಯ್ಯ | ಕಾರಣವೇನು?
ಕುವೆಂಪು ವಿವಿ ಸಿಂಡಿಕೇಟ್, ಅಕಾಡೆಮಿಕ್, ಸೆನಟ್ ಸದಸ್ಯರಾಗಿ, ಎರಡು ಬಾರಿ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿ, ಸೇಲಂ ರೈಲ್ವೆ ಬೋರ್ಡ್ ಸದಸ್ಯರಾಗಿ ರಮೇಶ್ ಅವರು ಸೇವೆ ಸಲ್ಲಿಸಿದ್ದಾರೆ.
1999 ರಿಂದ ಎಂಟು ವರ್ಷಗಳ ಕಾಲ ಮೀರ್ ಅಜೀಜ್ ಆಹಮ್ಮದ್, ಆರ್. ಪ್ರಸನ್ನಕುಮಾರ್ ಅವರ ಅಧ್ಯಕ್ಷತೆಯ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಎನ್. ರಮೇಶ್ ಲೋಕಸಭೆ, ವಿಧಾನ ಸಭೆ. ಮತ್ತು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post