ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನನ್ನ ಸ್ಪರ್ಧೆಯಿಂದ ವಿರೋಧಿಗಳಿಗೆ ಹೆದರಿಕೆ ಆರಂಭವಾಗಿದ್ದು, ಇದಕ್ಕಾಗಿ ನನ್ನನ್ನು ವೀಕ್ ಕ್ಯಾಂಡಿಡೇಟ್ ಎಂದು ಎನ್ನುತ್ತಿದ್ದಾರೆ ಎಂದು ಪ್ರತಿಸ್ಪರ್ಧಿಗಳಿಗೆ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ #GeethaShivarajkumar ತಿರುಗೇಟು ನೀಡಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾನು ಯಾಕೆ ವೀಕ್ ಕ್ಯಾಂಡಿಡೇಟ್ ಆಗುತ್ತೇನೆ. ಅವರಿಗೆ ನನ್ನ ಸ್ಪರ್ಧೆಯಿಂದಲೇ ಹೆದರಿಕೆಯಾಗಿರುವ ಕಾರಣ ನನ್ನನ್ನು ವೀಕ್ ಕ್ಯಾಂಡಿಡೇಟ್ ಎನ್ನುತ್ತಿದ್ದಾರೆ ಎಂದರು.
ನಾಳೆ ನಾಮಪತ್ರ ಸಲ್ಲಿಕೆ
ತಾವು ನಾಳೆಯೇ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದ ಗೀತಾ ಶಿವರಾಜಕುಮಾರ್ ಅವರು, ಈ ವೇಳೆ ಡಿಸಿಎಂ ಡಿಕೆ ಶಿವಕುಮಾರ್, #DKShivarajkumar ಸಚಿವ ಮಧು ಬಂಗಾರಪ್ಪ, ಶಿವರಾಜಕುಮಾರ್ #Shivarajkumar ಪಾಲ್ಗೊಳ್ಳಲ್ಲಿದ್ದಾರೆ. ಇವರೊಂದಿಗೆ ಹಲವು ಸಿನಿಮಾ ನಟರು ನಮ್ಮ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಮೋದಿ ಅಲೆ ಬಗ್ಗೆ ನನಗೆ ಗೊತ್ತಿಲ್ಲ
ಕ್ಷೇತ್ರದಲ್ಲಿ ಪ್ರಧಾನಿ ಮೋದಿ #PMModi ಅಲೆ ಬಗ್ಗೆ ನನಗೆ ಗೊತ್ತಿಲ್ಲ. ನಾನು ಎದುರಾಳಿ ಬಗ್ಗೆ ಯೋಚನೆ ಮಾಡುವುದಿಲ್ಲ. ನಮ್ಮ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಹಾಲಿ ಸಂಸದರ ಪ್ರೋಗ್ರೆಸ್ ರಿಪೋರ್ಟ್ ನೋಡಿದ್ದೇನೆ. ಅದರಲ್ಲಿ ನಿಜವಿಲ್ಲ. ಇದೇ ವೇಳೆ ಈಶ್ವರಪ್ಪನವರ #KSEshwarappa ಸ್ಪರ್ಧೆಯಿಂದ ನಮಗೆ ಯಾವುದೇ ರೀತಿಯ ಲಾಭ ನಷ್ಟದ ಪ್ರಶ್ನೆಯೇ ಇಲ್ಲ ಎಂದರು.
2014ರ ಚುನಾವಣೆಗೂ ಈ ಬಾರಿಯ ಚುನಾವಣೆಗೆ ತುಂಬಾ ವ್ಯತ್ಯಾಸವಿದೆ. ಕಳೆದ ಬಾರಿ ಜೆಡಿಎಸ್’ನಿಂದ #JDS ಸ್ಪರ್ಧೆ ಮಾಡಿದ್ದು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದೇನೆ. ಕಳೆದ ಬಾರಿಗಿಂತ ಈ ಬಾರಿ ಮತದಾರರ ಒಲವು ನಮ್ಮ ಕಡೆ ಹೆಚ್ಚಾಗಿದೆ ಎಂದರು.
ಜನರು ಸಮಸ್ಯೆ ತೋಡಿಕೊಂಡಿದ್ದಾರೆ
ಕ್ಷೇತ್ರದ ತುಂಬಾ ನಾನು ಸಂಚಾರ ನಡೆಸಿದ್ದು, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಸಮಸ್ಯೆ, ಬರಗಾಲ ಮೊದಲಾದ ಸಮಸ್ಯೆಗಳ ಬಗ್ಗೆ ಜನರು ಅಳಲು ತೋಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚು ಸಮಯ ಇರುತ್ತೇನೆ. ನನ್ನ ಮಕ್ಕಳು ದೊಡ್ಡವರಾದ ಹಿನ್ನೆಲೆಯಲ್ಲಿ ನನಗೆ ಯಾವ ಸಮಸ್ಯೆಯೂ ಇಲ್ಲ ಎಂದರು.
ಶಿವಮೊಗ್ಗ #Shivamogga ಮತ್ತು ಸೊರಬದ #Soraba ಕುಬಟೂರಿನಲ್ಲಿ ನನಗೆ ಮನೆ ಇದೆ. ಜಿಲ್ಲೆಯಲ್ಲಿ ಬಗರು ಹುಕುಂ ಹಕ್ಕು ಪತ್ರದ ಸಮಸ್ಯೆ ಇದೆ. ಇದನ್ನು ನನ್ನ ಸಹೋದರ ಮಧು ಬಂಗಾರಪ್ಪ ಜೊತೆಗೂಡಿ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post