- ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಆರಂಭದ ದಿನಗಳಿಂದಲೂ ನಮ್ಮ ಕುಟುಂಬದೊಂದಿಗೆ ಒಂದಾಗಿದ್ದ ಹಿರಿಯ ನಟ ದ್ವಾರಕೀಶ್ ಅಂಕಲ್ #Dwarkeesh ಅವರು ಇಂದು ನಮ್ಮೊಂದಿಗೆ ಇಲ್ಲ ಎನ್ನುವ ವಿಚಾರ ನಮಗೆ ನೋವನ್ನುಂಟು ಮಾಡಿದೆ ಎಂದು ನಟ ಶಿವರಾಜಕುಮಾರ್ #Shivarajkumar ಕಂಬನಿ ಮಿಡಿದಿದ್ದಾರೆ.
ದ್ವಾರಕೀಶ್ ನಿಧನದ ಹಿನ್ನೆಲೆಯಲ್ಲಿ ನಗರದಲ್ಲಿ ಮಾತನಾಡಿದ ಅವರು, ಇದು ಅತ್ಯಂತ ನೋವಿನ ಸಂಗತಿ. ದೂರದ ಬೆಟ್ಟ ಸಿನಿಮಾದಲ್ಲಿ ಅವರ ನಮ್ಮ ತಂದೆಯವರೊಂದಿಗೆ ಅಭಿನಯಿಸಿದ ದಿನದಿಂದಲೂ ನಿರಂತರವಾಗಿ ನಮ್ಮ ಕುಟುಂಬದೊಂದಿಗೆ ಒಡನಾಟ ಹೊಂದಿದ್ದರು. ನಮ್ಮ ತಂದೆ ಅಭಿನಯಿಸುವ ಸಿನಿಮಾದಲ್ಲಿ ದ್ವಾರಕೀಶ್ ಅಂಕಲ್ ಇರಲೇಬೇಕಿತ್ತು ಎಂದರು.
ನನ್ನನ್ನು ಚಿಕ್ಕ ವಯಸ್ಸಿನಿಂದಲೇ ನೋಡಿರುವ ಅವರು, ನಮ್ಮ ಕುಟುಂಬದ ಭಾಗದಂತೆಯೇ ಆಗಿದ್ದರು. ಇಂದು ಅವರು ನಮ್ಮೊಂದಿಗಿಲ್ಲ ಎನ್ನುವುದನ್ನು ನೆನಪಿಸಿಕೊಳ್ಳಲು ನೋವಾಗುತ್ತಿದೆ ಎಂದು ದುಃಖ ವ್ಯಕ್ತಪಡಿಸಿದರು.
Also read: ತಮ್ಮ ಪರ ಪ್ರಚಾರ ಮಾಡುವ ಸ್ಟಾರ್ ಕ್ಯಾಂಪೇನರ್ ಯಾರು? ಬಿ.ವೈ. ರಾಘವೇಂದ್ರ ಹೇಳಿದ್ದು ಇವರೇ ನೋಡಿ
ದ್ವಾರಕೀಶ್ ಅವರ ಕುಟುಂಬದೊಂದಿಗೆ ನಾವು ಸದಾ ಇದ್ದೇವೆ. ಅವರ ಮಕ್ಕಳು ನಮಗೆ ತುಂಬಾ ಆತ್ಮೀಯರು. ಅವರ ಪ್ರೊಡಕ್ಷನ್’ನ ಆಯುಷ್ಮಾನ್ ಭವ ಚಿತ್ರದಲ್ಲಿ ನಾನು ಅಭಿನಯಿಸಿದ್ದೇನೆ. ಅವರದ್ದು ಅದ್ದೂರಿ ಪ್ರೊಡಕ್ಷನ್. ದ್ವಾರಕೀಶ್ ಅಂಕಲ್ ಮಕ್ಕಳೊಂದಿಗೆ ನಾವು ಸದಾ ಇದ್ದೇವೆ. ಅವರಿಗೆ ದುಃಖ ತಡೆಯುವ ಶಕ್ತಿ ದೊರೆಯಲಿ, ಅಂಕಲ್ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post